ADVERTISEMENT

ವಲಸೆ ಕಾರ್ಮಿಕರ ಅನುಕೂಲಕ್ಕೆ ಮರು ಕೌಶಲ ತರಬೇತಿ ನೀಡಲು ಮುಂದಾದ ಕೇಂದ್ರ ಸರ್ಕಾರ

ಕ್ರಮಕ್ಕೆ ಮುಂದಾದ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 13:58 IST
Last Updated 14 ಜೂನ್ 2020, 13:58 IST
   

ನವದೆಹಲಿ:ವಲಸಿಗ ಕಾರ್ಮಿಕರು ಸ್ಥಳೀಯವಾಗಿಯೇ ಉದ್ಯೋಗ ಪಡೆಯಲು ಸಾಧ್ಯವಾಗಿಸುವ ನಿಟ್ಟಿನಲ್ಲಿ ಅವರಿಗೆ ಮರು ಕೌಶಲ ತರಬೇತಿ ನೀಡಲು ಸರ್ಕಾರ ಮುಂದಾಗಿದೆ.

ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್‌ಗೆ ಗರಿಷ್ಠ ಪ್ರಮಾಣದಲ್ಲಿ ವಲಸೆ ಕಾರ್ಮಿಕರು ಹಿಂತಿರುಗಿದ್ದು, ಈ ರಾಜ್ಯಗಳಲ್ಲಿಉದ್ಯೋಗಗಳನ್ನು ಸೃಷ್ಟಿಸಬಹುದಾದ ಹೊಸ ಕ್ಷೇತ್ರಗಳನ್ನು ಗುರುತಿಸಲು ಕೌಶಲ ಅಭಿವೃದ್ಧಿಮತ್ತು ಉದ್ಯಮಶೀಲತೆಸಚಿವಾಲಯ ಕ್ರಮ ತೆಗೆದುಕೊಂಡಿದೆ.

ಗರಿಷ್ಠ ಸಂಖ್ಯೆಯಲ್ಲಿ ಕಾರ್ಮಿಕರು ಮರಳಿರುವ ರಾಜ್ಯದ ಕಲಬುರ್ಗಿ, ಯಾದಗಿರಿ, ಕೊಪ್ಪಳ, ರಾಯಚೂರು ಸೇರಿದಂತೆ 116 ಜಿಲ್ಲೆಗಳನ್ನು ಸಚಿವಾಲಯ ಗುರುತಿಸಿದ್ದು, ಜಿಲ್ಲಾಧಿಕಾರಿಗಳ ಸಹಕಾರದೊಂದಿಗೆ ಅವರಿಗೆ ತರಬೇತಿ ನೀಡಲು ಸಚಿವಾಲಯ ಕ್ರಮ ತೆಗೆದುಕೊಂಡಿದೆ.

ADVERTISEMENT

ಬಹುತೇಕ ಕಾರ್ಮಿಕರು ಎಲೆಕ್ಟ್ರಿಷಿಯನ್, ಪ್ಲಂಬರ್‌, ಪೇಂಟರ್‌, ಬಡಗಿ, ಚಾಲಕ ಕೆಲಸ ಮಾಡುತ್ತಿದ್ದರು.‌ ಸ್ಥಳೀಯ ಅಗತ್ಯಗಳಿಗೆ ಅನುಸಾರವಾಗಿ ಈ ಕಾರ್ಮಿಕರಿಗೆ ಮರು ಕೌಶಲ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರ್ಕಾರ ಹಮ್ಮಿಕೊಳ್ಳುತ್ತಿರುವ ಕೌಶಲ ಮಾಪನ ಕಾರ್ಯಾಗಾರದಿಂದ ಕಾರ್ಮಿಕರಿಗೆ ಅಲ್ಫಾವಧಿ ತರಬೇತಿ ನೀಡಲು ಸಾಧ್ಯವಾಗುತ್ತದೆ. ಕಾರ್ಮಿಕರು ಮರುಕೌಶಲ ಹೊಂದಲು ಯಾವ ರೀತಿಯ ಕಲಿಕಾ ವಿಧಾನ ಅನುಸರಿಸಬೇಕು ಎಂಬುದೂ ತಿಳಿಯುತ್ತದೆ ಎಂದು ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.