ADVERTISEMENT

ಕೋವಿಡ್: ವೆಚ್ಚ ನಿರ್ಬಂಧ ಹಿಂಪಡೆದ ಸರ್ಕಾರ

ವೆಚ್ಚದ ನಿರ್ಬಂಧ ತಕ್ಷಣದಿಂದಲೇ ಜಾರಿಗ ಬರುವಂತೆ ಹಿಂಪಡೆದ ಹಣಕಾಸು ಸಚಿವಾಲಯ

ಪಿಟಿಐ
Published 24 ಸೆಪ್ಟೆಂಬರ್ 2021, 11:09 IST
Last Updated 24 ಸೆಪ್ಟೆಂಬರ್ 2021, 11:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್-19 ಎರಡನೇ ಅಲೆಯ ಕಾರಣ ಜೂನ್‌ನಲ್ಲಿ ವಿಧಿಸಲಾಗಿದ್ದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳ ಮೇಲಿನ ವೆಚ್ಚ ನಿರ್ಬಂಧವನ್ನು ಹಣಕಾಸು ಸಚಿವಾಲಯ ಶುಕ್ರವಾರ ಹಿಂಪಡೆದಿದೆ.

ಸಾರ್ವಜನಿಕ ಹಣಕಾಸು ಸುಧಾರಣೆ ಮತ್ತು ಬೆಳವಣಿಗೆಯನ್ನು ಹೆಚ್ಚಿಸುವ ತುರ್ತು ಕಾರಣಕ್ಕಾಗಿ ಹಾಗೂ ಮಾರ್ಗಸೂಚಿಗಳ ಪರಿಶೀಲನೆಯ ನಂತರ ವೆಚ್ಚ ನಿರ್ಬಂಧವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಹಣಕಾಸು ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT