ADVERTISEMENT

ಜಿಎಸ್‌ಟಿ ಸುಧಾರಣೆ | ಬಡವರು– ರೈತರ ಸೇವೆಗೆ ಸಾಕ್ಷಿ: ಕೇಂದ್ರ ಗೃಹ ಸಚಿವ ಅಮಿತ್ ಶಾ

ಪಿಟಿಐ
Published 22 ಸೆಪ್ಟೆಂಬರ್ 2025, 15:42 IST
Last Updated 22 ಸೆಪ್ಟೆಂಬರ್ 2025, 15:42 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ: ಬಡವರು, ಯುವಕರು, ಮಹಿಳೆಯರು ಮತ್ತು ರೈತರಿಗೆ ಸೇವೆ ಸಲ್ಲಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದೃಢಸಂಕಲ್ಪಕ್ಕೆ ಜಿಎಸ್‌ಟಿಯಲ್ಲಿನ ಸುಧಾರಣೆಗಳು ಸಾಕ್ಷಿಯಾಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ದೇಶದಾದ್ಯಂತ ಹೊಸ ತೆರಿಗೆ ದರಗಳು ಸೋಮವಾರದಿಂದ ಜಾರಿಯಾಗುತ್ತಿದ್ದಂತೆ ಶಾ ಈ ಹೇಳಿಕೆ ನೀಡಿದ್ದಾರೆ.

ವಿಶ್ವದ ಅತ್ಯಂತ ಸಮೃದ್ಧ ರಾಷ್ಟ್ರವಾಗುವ ಪಥದಲ್ಲಿ ದೇಶದ ಬೆಳವಣಿಗೆಯ ವೇಗವನ್ನು ತೆರಿಗೆಯಲ್ಲಿನ ಹೊಸ ಸುಧಾರಣೆಗಳು ಮತ್ತಷ್ಟು ಹೆಚ್ಚಿಸಲಿವೆ ಎಂದಿದ್ದಾರೆ. ಈ ಕುರಿತಂತೆ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಸರಣಿ ‘ಎಕ್ಸ್‌’ ಮಾಡಿದ್ದಾರೆ.

ADVERTISEMENT

ಮಧ್ಯಮ ವರ್ಗದವರಿಗೆ ಸಾಕಷ್ಟು ಅವಕಾಶ ಕಲ್ಪಿಸಿರುವ ಮೋದಿ ಸರ್ಕಾರವು ಇದೀಗ ತೆರಿಗೆ ಸುಧಾರಣೆ ಮೂಲಕ ಅವರ ಉಳಿತಾಯವು ನಿರಂತರವಾಗಿ ಏರಿಕೆಯಾಗುವುದನ್ನು ಖಾತ್ರಿಪಡಿಸುವ ಜೊತೆಗೆ ಆದಾಯವನ್ನೂ ಹೆಚ್ಚಿಸಲಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ದಸರಾ ಹಬ್ಬದ ಶುಭ ಸಂದರ್ಭದಲ್ಲಿ 390 ಸರಕುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸುವ ಮೂಲಕ ತಾಯಂದಿರಿಗೆ, ಸಹೋದರಿಯರಿಗೆ ಉಡುಗೊರೆ ನೀಡಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.