ADVERTISEMENT

ಗುಜರಾತ್‌ | ಮೊಹರಂ ಮೆರವಣಿಗೆ: ವಿದ್ಯುತ್‌ ಆಘಾತದಿಂದ ಇಬ್ಬರು ಸಾವು

ಪಿಟಿಐ
Published 9 ಆಗಸ್ಟ್ 2022, 14:42 IST
Last Updated 9 ಆಗಸ್ಟ್ 2022, 14:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಾಮ್‌ನಗರ (ಗುಜರಾತ್‌): ಮೊಹರಂನ ಮುನ್ನಾ ದಿನವಾದ ಸೋಮವಾರದಂದು ತಾಜಿಯಾ (ಇಮಾಮ್‌ ಹುಸೇನ್‌ನರ ಗೋರಿಯ ಪ್ರತಿಕೃತಿ) ಹೊತ್ತು ಮೆರವಣಿಗೆ ಸಾಗುತ್ತಿದ್ದವರ ಮೇಲೆ ವಿದ್ಯುತ್‌ ಪ್ರವಹಿಸಿ ಇಬ್ಬರು ಮೃತಪಟ್ಟಿದ್ದಾರೆ. ಹತ್ತು ಮಂದಿಗೆ ಗಾಯಗಳಾಗಿವೆ ಎಂದು ಪೊಲೀಸರು ಮಂಗಳವಾರ ತಿಳಿಸಿದರು.

ಸೋಮವಾರ ರಾತ್ರಿ 11.15ರ ಹೊತ್ತಿಗೆ ಮೆರವಣಿಗೆಯು ಧಾರಾನಗರದ ಹತ್ತಿರ ತಲುಪಿತ್ತು. ಈ ವೇಳೆ ತಾಜಿಯಾದ ಮೇಲ್ಭಾಗ ವಿದ್ಯುತ್‌ ತಂತಿಯೊಂದಕ್ಕೆ ತಾಕಿತು. ಈ ವೇಳೆ ಕಿಡಿ ಹೊತ್ತುಕೊಂಡಿತು. ತಾಜಿಯಾ ಹೊತ್ತು ಸಾಗುತ್ತಿದ್ದ 12 ಮಂದಿಗೆ ವಿದ್ಯುತ್‌ ಪ್ರವಹಿಸಿತು ಎಂದು ಘಟನೆ ಕುರಿತು ಪೊಲೀಸರು ವಿವರಣೆ ನೀಡಿದರು.

ತಾಜಿಯಾವನ್ನು ಬಿದಿರಿನಿಂದ ಮಾಡಲಾಗುತ್ತದೆ. ಇದನ್ನು ವಿದ್ಯುತ್‌ ದೀಪಗಳಿಂದ, ಬಣ್ಣದ ಕಾಗದಗಳಿಂದ ಅಲಂಕಾರ ಮಾಡಲಾಗುತ್ತದೆ. 12 ಮಂದಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಇವರಲ್ಲಿ ಇಬ್ಬರು ಮೃತಪಟ್ಟರು. ಮೃತರನ್ನು ಆಸಿಫ್‌ ಯುನುಸ್‌ಭಾಯಿ ಮಲೀಕ್ (23) ಹಾಗೂ ಮೊಹಮ್ಮದ್‌ ವಹೀದ್‌ (25) ಎಂದು ಗುರುತಿಸಲಾಗಿದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.