ADVERTISEMENT

ಗುಜರಾತ್: ಬಿಜೆಪಿ ಶಾಸಕ ಕರ್ಶಣ್‌ಭಾಯ್ ಸೋಲಂಕಿ ನಿಧನ

ಪಿಟಿಐ
Published 4 ಫೆಬ್ರುವರಿ 2025, 5:17 IST
Last Updated 4 ಫೆಬ್ರುವರಿ 2025, 5:17 IST
<div class="paragraphs"><p>ಜೆಪಿ ಶಾಸಕ ಕರ್ಶಣ್‌ಭಾಯ್ ಸೋಲಂಕಿ</p></div>

ಜೆಪಿ ಶಾಸಕ ಕರ್ಶಣ್‌ಭಾಯ್ ಸೋಲಂಕಿ

   

(ಚಿತ್ರ ಕೃಪೆ–X)

ಅಹಮದಾಬಾದ್: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಗುಜರಾತ್ ಬಿಜೆಪಿ ಶಾಸಕ ಕರ್ಶಣ್‌ಭಾಯ್ ಸೋಲಂಕಿ ಇಂದು(ಮಂಗಳವಾರ) ಮುಂಜಾನೆ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.

ADVERTISEMENT

ಮೆಹ್ಸಾನಾ ಜಿಲ್ಲೆಯ ಕಾಡಿ ವಿಧಾನಸಭಾ ಕ್ಷೇತ್ರದ ಶಾಸಕ ಸೋಲಂಕಿ ಅವರು, ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ಕಾಡಿ ತಾಲ್ಲೂಕಿನ ನಾಗರಸನ್‌ನಲ್ಲಿ ಮಧ್ಯಾಹ್ನದ ಬಳಿಕ ನೆರವೇರಿಸಲಾಗುವುದು ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿರುವ ಕಾಡಿ ವಿಧಾನಸಭಾ ಕೇತ್ರದಿಂದ 2017 ಹಾಗೂ 2022ರಲ್ಲಿ ಸೋಲಂಕಿ ಗೆಲುವು ಸಾಧಿಸಿದ್ದರು.

ಸೋಲಂಕಿ ಅವರ ನಿಧನಕ್ಕೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಂತಾಪ ಸೂಚಿಸಿದ್ದಾರೆ. 'ಕಾಡಿ ವಿಧಾನಸಭೆಯ ಭಾರತೀಯ ಜನತಾ ಪಕ್ಷದ ಶಾಸಕ ಕರ್ಶಣ್‌ಭಾಯ್ ಸೋಲಂಕಿ ಅವರ ನಿಧನಕ್ಕೆ ಸಂತಾಪಗಳು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಸ್ಥರು ಹಾಗೂ ಬೆಂಬಲಿಗರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ' ಎಂದು ಪಟೇಲ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಗುಜರಾತ್ ಬಿಜೆಪಿ ಘಟಕದ ಅಧ್ಯಕ್ಷ ಸಿ.ಆರ್. ಪಾಟೀಲ್ ಸೇರಿದಂತೆ ಹಲವು ನಾಯಕರು ಸೋಲಂಕಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.