ADVERTISEMENT

ಗುಜರಾತ್ ದೋಣಿ ದುರಂತ: ಮೂವರ ಬಂಧನ

ಪಿಟಿಐ
Published 19 ಜನವರಿ 2024, 16:04 IST
Last Updated 19 ಜನವರಿ 2024, 16:04 IST
ವಡೋದರಾ ಹೊರವಲಯದ ಕೆರೆಯಲ್ಲಿ ದೋಣಿ ಮುಳುಗಿ ಒಟ್ಟು 14 ಮಂದಿ ಸತ್ತಿದ್ದು, ದುರಂತದಲ್ಲಿ ಮೃತರಾದವರ ಅಂತ್ಯಸಂಸ್ಕಾರವನ್ನು ಸಂಬಂಧಿಕರು ನೆರವೇರಿಸಿದರು.
ಪಿಟಿಐ ಚಿತ್ರ 
ವಡೋದರಾ ಹೊರವಲಯದ ಕೆರೆಯಲ್ಲಿ ದೋಣಿ ಮುಳುಗಿ ಒಟ್ಟು 14 ಮಂದಿ ಸತ್ತಿದ್ದು, ದುರಂತದಲ್ಲಿ ಮೃತರಾದವರ ಅಂತ್ಯಸಂಸ್ಕಾರವನ್ನು ಸಂಬಂಧಿಕರು ನೆರವೇರಿಸಿದರು. ಪಿಟಿಐ ಚಿತ್ರ    

ವಡೋದರಾ (ಪಿಟಿಐ): 12 ಶಾಲಾ ಮಕ್ಕಳು ಹಾಗೂ ಇಬ್ಬರು ಶಿಕ್ಷಕರು ಸಾವನ್ನಪ್ಪಿದ್ದ ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿ, ಗುತ್ತಿಗೆದಾರ ಸಂಸ್ಥೆಯ ವ್ಯವಸ್ಥಾಪಕ ಸೇರಿ ಮೂವರನ್ನು ಬಂಧಿಸಲಾಗಿದೆ.

ಗುರುವಾರ ಮಧ್ಯಾಹ್ನ ನಡೆದ ದುರ್ಘಟನೆಗೆ ಸಂಬಂಧಿಸಿ ಹರ್ನಿ ಪೊಲೀಸರು, ಹರ್ನಿ ಕೆರೆ ವಲಯದ ಗುತ್ತಿಗೆ ಪಡೆದಿದ್ದ ಕೋಟಿಯಾ ಪ್ರಾಜೆಕ್ಟ್ಸ್‌ನ 18 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.  

ಪರಿಹಾರ: ದೋಣಿ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹ 50 ಸಾವಿರ ಪರಿಹಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. 

ADVERTISEMENT

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಮೃತರ ಕುಟುಂಬಗಳಿಗೆ ತಲಾ ₹4 ಲಕ್ಷ ಹಾಗೂ ಗಾಯಾಳುಗಳಿಗೆ ₹50 ಸಾವಿರ ಪರಿಹಾರ ಘೋಷಿಸಿದ್ದಾರೆ.

ದೋಣಿಯಲ್ಲಿ ಕೇವಲ 14 ಜನರಿಗೆ ಸ್ಥಳಾವಕಾಶವಿದ್ದು, ಅದರ ದುಪ್ಪಟ್ಟು ಜನರನ್ನು ತುಂಬಿಸಿಕೊಂಡು ಹೋಗಿದ್ದೇ ಅವಘಡಕ್ಕೆ ಕಾರಣ ಎಂಬುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.