ADVERTISEMENT

ಸೆಕ್ಷನ್ 144 ಬಳಕೆಗೆ ಅಸಮಾಧಾನ: ಅಹಮದಾಬಾದ್ ಪೊಲೀಸರ ಆದೇಶ ರದ್ದುಪಡಿಸಿದ ಹೈಕೋರ್ಟ್

ಸಿಆರ್‌ಪಿಸಿ ಸೆಕ್ಷನ್ 144 ಪದೇಪದೇ ಬಳಕೆಗೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 15:38 IST
Last Updated 6 ಡಿಸೆಂಬರ್ 2025, 15:38 IST
-
-   

ಅಹಮದಾಬಾದ್‌: ಅಹಮದಾಬಾದ್‌ ಪೊಲೀಸ್‌ ಕಮಿಷನರ್‌ ಮೇಲಿಂದ ಮೇಲೆ ಸಿಆರ್‌ಪಿಸಿ ಸೆಕ್ಷನ್ 144 ಹಾಗೂ ಗುಜರಾತ್‌ ಪೊಲೀಸ್‌ ಕಾಯ್ದೆಯ ಸೆಕ್ಷನ್ 37 ಜಾರಿಗೊಳಿಸಿ ಹೊರಡಿಸಿದ ಅಧಿಸೂಚನೆಗಳನ್ನು ರದ್ದುಗೊಳಿಸಿ ಗುಜರಾತ್‌ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ.

ಈ ಸೆಕ್ಷನ್‌ಗಳು, ಪೊಲೀಸರ ಅನುಮತಿ ಇಲ್ಲದೆಯೇ ನಾಲ್ವರು ಅಥವಾ ಅದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವುದನ್ನು ನಿಷೇಧಿಸುತ್ತve.

‘ನಾಗರಿಕ ಸಂಘಟನೆಗಳು ಸರ್ಕಾರದ ನಿರ್ಧಾರಗಳನ್ನು ವಿರೋಧಿಸಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಮುಂದಾದ ವೇಳೆ, ಈ ಸೆಕ್ಷನ್‌ಗಳನ್ನು ಜಾರಿಗೊಳಿಸುವ ಮೂಲಕ ಅನುಮತಿ ನಿರಾಕರಿಸುವ ಏಕೈಕ ವಿಧಾನವನ್ನು ಅಹಮದಾಬಾದ್‌ ಪೊಲೀಸರು ಬಳಸುತ್ತಿದ್ದಾರೆ’ ಎಂದು ನ್ಯಾಯಮೂರ್ತಿ ಎಂ.ಆರ್‌.ಮೆಂಗ್ಡೆ ಅವರು ಡಿಸೆಂಬರ್‌ 4ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ಈ ಸೆಕ್ಷನ್‌ ಅಡಿ ಅಹಮದಾಬಾದ್ ಪೊಲೀಸ್‌ ಹೊರಡಿಸಿರುವ ಎಲ್ಲ ಅಧಿಸೂಚನೆಗಳನ್ನು ರದ್ದು ಮಾಡಿರುವ ನ್ಯಾಯಮೂರ್ತಿ ಮೆಂಗ್ಡೆ, ಇಂತಹ ಕ್ರಮ ಕೈಗೊಳ್ಳುವ ವೇಳೆ ಪೊಲೀಸರು ನಿಯಮಗಳ ಪಾಲನೆ ಮಾಡಿಲ್ಲ ಎಂದು ಹೇಳಿದ್ದಾರೆ.

ಐಐಎಂ–ಅಹಮದಾಬಾದ್‌ನ ಪ್ರಾಧ್ಯಾಪಕರಾದ ನವದೀಪ್‌ ಮಾಥೂರ್‌, ಅಂಕುರ್‌ ಸರಿನ್‌, ಅಹಮದಾಬಾದ್‌ ವಿಶ್ವವಿದ್ಯಾಲಯ ಪ್ರಾಧ್ಯಾಪಕ ರಾಘವನ್ ರಾಜನ್, ಉದ್ಯಮಿಗಳಾದ ಅರ್ಚನಾ ಶಾ, ಸಂಜೀವ್‌ ಶಾ ಹಾಗೂ ಇತರರು ಈ ಕುರಿತು ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರು ಈ ಹಿಂದೆ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟಿಸಲು ಉದ್ದೇಶಿಸಿದ್ದರು. ಅದಕ್ಕೆ ಅಹಮದಾಬಾದ್‌ ಪೊಲೀಸರು ಅನುಮತಿ ನೀಡಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.