ADVERTISEMENT

ಸಿಯಾಲ್‌ಕೋಟ್‌ ಗುರುದ್ವಾರ: ಭಾರತದ ಸಿಖ್‌ ಯಾತ್ರಿಕರ‌ ಭೇಟಿಗೆ ಅವಕಾಶ ನೀಡಿದ ಪಾಕ್

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 20:15 IST
Last Updated 1 ಜುಲೈ 2019, 20:15 IST

ಲಾಹೋರ್ (ಪಿಟಿಐ): ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿರುವ 500 ವರ್ಷಗಳಷ್ಟು ಹಳೆಯದಾದ ಗುರುದ್ವಾರಕ್ಕೆ ಇನ್ನು ಭಾರತದ ಸಿಖ್‌ ಧರ್ಮೀಯರು ಭೇಟಿ ನೀಡಬಹುದಾಗಿದೆ.

ಲಾಹೋರ್‌ನಿಂದ 140 ಕಿ.ಮೀ ದೂರದಲ್ಲಿರುವ ಬಾಬೆ–ದೆ–ಬೆರ್‌ ಗುರುದ್ವಾರ ಪ್ರವೇಶಕ್ಕೆಭಾರತೀಯರಿಗೆ ಅನುಮತಿ ನೀಡುವಂತೆಪಂಜಾಬ್‌ ಪ್ರಾಂತ್ಯದ ರಾಜ್ಯಪಾಲ ಮೊಹಮ್ಮದ್‌ ಸರ್ವರ್ ಅವರು ಧಾರ್ಮಿಕ ಮಂಡಳಿಗೆ ನಿರ್ದೇಶನ ನೀಡಿದ್ದಾರೆ ಎಂದುಸ್ಥಳೀಯ ಮಾಧ್ಯಮ ವರದಿ ಮಾಡಿದೆ.ಭಾರತದ ಯಾತ್ರಿಕರೊಂದಿಗೆಕೆನಡಾ, ಅಮೆರಿಕ, ಯೂರೋಪ್‌ನ ಸಿಖ್‌ ಧರ್ಮೀಯರೂ ಪ್ರವಾಸ ಕೈಗೊಳ್ಳಬಹುದಾಗಿದೆ.

ಸಿಖ್‌ ಧಾರ್ಮಿಕ ಗುರುಗುರುನಾನಕ್‌ ಅವರು 16ನೇ ಶತಮಾನದಲ್ಲಿ ಕಾಶ್ಮೀರದಿಂದ ಸಿಯಾಲ್‌ಕೋಟ್‌ಗೆ ಬಂದಾಗ ಇಲ್ಲಿನ ಹಣ್ಣಿನ ಮರದ ಕೆಳಗೆ ಆಶ್ರಯ ಪಡೆದಿದ್ದರು. ಅದೇ ಮರದ ಬಳಿ ಸರ್ದಾರ್ ನಾಥಸಿಂಗ್‌ ಎಂಬುವವರು ಗುರುದ್ವಾರ ನಿರ್ಮಿಸಿದರು ಎಂಬುದು ಸಿಖ್‌ ಧರ್ಮೀಯರ ನಂಬಿಕೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.