ADVERTISEMENT

ಸರ್ಕಾರಿ ದಾವೆಗೆ ಕಡಿವಾಣ ಬಿದ್ದರೆ ನ್ಯಾಯಾಂಗದ ಅರ್ಧ ಸಮಸ್ಯೆ ಬಗೆಹರಿದಂತೆ: ರಮಣ

ಪಿಟಿಐ
Published 24 ಸೆಪ್ಟೆಂಬರ್ 2022, 12:39 IST
Last Updated 24 ಸೆಪ್ಟೆಂಬರ್ 2022, 12:39 IST
ಎನ್‌.ವಿ.ರಮಣ
ಎನ್‌.ವಿ.ರಮಣ   

ಹೈದರಾಬಾದ್‌: ‘ಸರ್ಕಾರಿ ಪ್ರಾಯೋಜಿತ ಮೊಕದ್ದಮೆಗಳಿಗೆ ಸರ್ಕಾರವು ಕಡಿವಾಣ ಹಾಕಿದರೆ ನ್ಯಾಯಾಂಗದ ಅರ್ಧ ಸಮಸ್ಯೆ ಬಗೆಹರಿಯುತ್ತದೆ’ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಹೇಳಿದ್ದಾರೆ.

‘ಐಎಸ್‌ಬಿ ಲೀಡರ್‌ಷಿಪ್‌ ಸಮ್ಮೇಳನ–2022’ರಲ್ಲಿ ಪಾಲ್ಗೊಂಡು ಶನಿವಾರ ಮಾತನಾಡಿದ ಅವರು, ‘ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಕೂಡ ನ್ಯಾಯಾಂಗ ವ್ಯವಸ್ಥೆ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ರಾಷ್ಟ್ರಮಟ್ಟದ ಅಧ್ಯಯನದಿಂದ ಇದು ತಿಳಿದುಬಂದಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ನ್ಯಾಯಾಂಗದ ಪಾಲಿಗೆ ಸರ್ಕಾರವೇ ದೊಡ್ಡ ದಾವೆಗಾರ. ಅಂತರ ವಿಭಾಗೀಯ ವ್ಯಾಜ್ಯಗಳು, ಸೇವಾ ವಿಚಾರಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸುವುದೇದೊಡ್ಡ ಸಮಸ್ಯೆಯಾಗಿದೆ’ ಎಂದಿದ್ದಾರೆ.

ADVERTISEMENT

ಅಂಗವಿಕಲರಿಗೆ ನ್ಯಾಯಾಂಗ ಸೇವೆ ಸುಲಭವಾಗಿ ದೊರೆಯುವಂತಾಗಬೇಕು (ನವದೆಹಲಿ ವರದಿ): ‘ಅಂಗವಿಕಲರಿಗೆ ನ್ಯಾಯಾಂಗ ಸೇವೆಯು ಸುಲಭವಾಗಿ ದೊರೆಯುವಂತಾಗಬೇಕು. ಈ ದಿಸೆಯಲ್ಲಿ ಸುಪ್ರೀಂ ಕೋರ್ಟ್‌ನ ಇ–ಸಮಿತಿಯು ಡಿಜಿಟಲ್‌ ಮೂಲಸೌಕರ್ಯ ರೂಪಿಸಲು ಮುಂದಾಗಿದೆ’ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಶನಿವಾರ ತಿಳಿಸಿದ್ದಾರೆ.

‘ಅಗತ್ಯ ಕಾನೂನು ಇದ್ದರೂ ಕೂಡ ಕೆಲ ಸರ್ಕಾರಿ–ಖಾಸಗಿ ಕಚೇರಿಗಳು, ಸಾರಿಗೆ ಸೇವೆ, ಉದ್ಯಾನಗಳು ಹಾಗೂ ಇತರೆ ಸ್ಥಳಗಳು ಅಂಗವಿಕಲರಿಗೆ ಮುಕ್ತವಾಗಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.