ADVERTISEMENT

ಬಿಜೆಪಿ ಶಾಸಕನ ಕಚೇರಿ ಮೇಲಿನ ದಾಳಿ ಪ್ರಕರಣ: ಹಾರ್ದಿಕ್ ಪಟೇಲ್‌ಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 25 ಜುಲೈ 2018, 11:44 IST
Last Updated 25 ಜುಲೈ 2018, 11:44 IST
   

ಅಹಮದಾಬಾದ್: 2015ರಲ್ಲಿ ಬಿಜೆಪಿಕಚೇರಿಯಲ್ಲಿ ದಾಂಧಲೆ ನಡೆಸಿದ ಪ್ರಕರಣ ಸಂಬಂಧ2 ವರ್ಷ ಸೆರೆವಾಸ ಮತ್ತು ದಂಡಕ್ಕೆ ಗುರಿಯಾಗಿದ್ದ ಪಟೇಲ್‌ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್‌ ಪಟೇಲ್‌ಗೆ ಬುಧವಾರ ಜಾಮೀನು ದೊರಕಿದೆ

ಹಾರ್ದಿಕ್ ಪಟೇಲ್ ಮತ್ತು ಸರ್ದಾರ್ ಪಟೇಲ್ ಸಮುದಾಯದ ಮುಖಂಡ ಲಾಲ್ಜಿ ಪಟೇಲ್ ತಪ್ಪಿತಸ್ಥರು ಎಂದು ತೀರ್ಪು ನೀಡಿದ ಕೋರ್ಟ್, ಸೆರೆವಾಸದ ಜೊತೆ ₹50 ಸಾವಿರ ದಂಡ ವಿಧಿಸಿತ್ತು.

ಈ ಪ್ರಕರಣದಲ್ಲಿ ಒಟ್ಟು 17 ಆರೋಪಿಗಳ ಹೆಸರು ಕೇಳಿಬಂದಿತ್ತು.

2015ರ ಜುಲೈನಲ್ಲಿಪಟೇಲ್ ಸಮುದಾಯಕ್ಕೆಮೀಸಲಾತಿಗೆ ಆಗ್ರಹಿಸಿ ಭಾರಿ ಪ್ರತಿಭಟನೆ ನಡೆದಿತ್ತು. ಈ ವೇಳೆ ಬಿಜೆಪಿ ಶಾಸಕ ಋಷಿಕೇಶ್ ಪಟೇಲ್ ಕಚೇರಿ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿ ಧ್ವಂಸ ಮಾಡಿದ್ದರು.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.