ರೈಲು ಹಳಿಯ ಮೇಲೆ ಬಿದ್ದಿರುವ ಕಲ್ಲು ಮತ್ತು ಮಣ್ಣಿನ ತೆರವು ಕಾರ್ಯಾಚರಣೆ ನಡೆಯಿತು
ಪಿಟಿಐ ಚಿತ್ರ
ಹರಿದ್ವಾರ: ಇಲ್ಲಿನ ಹರ್ ಕಿ ಪೌರಿ ಬಳಿಯ ಮಾನಸಾದೇವಿ ಬೆಟ್ಟದಲ್ಲಿ ಭೂಕುಸಿತ ಸಂಭವಿಸಿದ್ದು, ಹರಿದ್ವಾರ–ಡೆಹ್ರಾಡೂನ್ ರೈಲು ಮಾರ್ಗಕ್ಕೆ ಹಾನಿಯಾಗಿದೆ.
ಮಾನಸಾದೇವಿ ಬೆಟ್ಟದಿಂದ ಬಂಡೆಗಳು ರೈಲು ಹಳಿಯ ಮೇಲೆ ಉರುಳಿಬಿದ್ದಿವೆ. ಇದರಿಂದಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇರಿದಂತೆ 12 ರೈಲುಗಳ ಸಂಚಾರ ಸ್ಥಗಿತಗೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ರೈಲು ಮಾರ್ಗದ ಸಮೀಪವಿದ್ದ ಶಿವ ದೇಗುಲಕ್ಕೂ ಹಾನಿಯಾಗಿದೆ’ ಎಂದು ಹೇಳಿದ್ದಾರೆ.
ಈ ಭಾಗದಲ್ಲಿ ಕೆಲ ದಿನಗಳ ಹಿಂದೆಯೂ ಭೂಕುಸಿತ ಸಂಭವಿಸಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯವಾಗಿತ್ತು. ರೈಲು ಹಳಿಗೆ ಹಾನಿಯಾಗುವುದನ್ನು ತಡೆಯುವ ಉದ್ದೇಶದಿಂದ ಬೆಟ್ಟ ಮತ್ತು ರೈಲು ಹಳಿಯ ಮಧ್ಯೆ ಕಬ್ಬಿಣದ ಬೃಹತ್ ಪರದೆಗಳನ್ನು ಅಳವಡಿಸಲಾಗಿತ್ತು. ಆದರೆ ದೊಡ್ಡ ದೊಡ್ಡ ಕಲ್ಲುಗಳು ಉರುಳಿ ಬಿದ್ದ ಪರಿಣಾಮ ಕಬ್ಬಿಣದ ಪರದೆಯು ಮುರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.