ADVERTISEMENT

ಟೋಲ್‌ ನೀಡಲು ನಿರಾಕರಣೆ: ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 19:58 IST
Last Updated 21 ಜೂನ್ 2019, 19:58 IST

ನವದೆಹಲಿ: ಗುರುಗ್ರಾಮದ ಖೇರ್ಕಿ ದೌಲಾದಲ್ಲಿನ ಟೋಲ್‌ ಒಂದರಲ್ಲಿ ಕಾರು ಚಾಲಕನೊಬ್ಬಕಾರ್ಯನಿರತ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ.

ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು,ಸಿ.ಸಿ.ಟಿ.ವಿಯಲ್ಲಿ ದಾಖಲಾಗಿದೆ. ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಟೋಲ್‌ ನೀಡಲು ನಿರಾಕರಿಸಿದ್ದಲ್ಲದೆ, ಅವಾಚ್ಯವಾಗಿ ಮಹಿಳೆಯನ್ನು ನಿಂದಿಸಿದ್ದಾನೆ. ಆತನನ್ನು ಹಿಡಿದುಕೊಳ್ಳಲು ಸಿಬ್ಬಂದಿ ಪ್ರಯತ್ನಪಟ್ಟಾಗ ಅವರನ್ನು ಥಳಿಸಿದ್ದಾನೆ.ಮಹಿಳೆಗೆ ತೀವ್ರ ಪೆಟ್ಟಾಗಿದೆ. ಚಾಲಕ ಪರಾರಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ಗುರುಗ್ರಾಮದಲ್ಲಿ ಕಳೆದ ವರ್ಷ ಕಾರು ಚಾಲಕನೊಬ್ಬ ಸಂಚಾರಿ ನಿಯಮ ಉಲ್ಲಂಘಿಸಿದ್ದಲ್ಲದೆ,ಪೊಲೀಸ್‌ ಸಿಬ್ಬಂದಿ ಮೇಲೆ ಕಾರು ಚಲಾಯಿಸಿದ್ದನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.