ADVERTISEMENT

ಇಂದು ಕೋರ್ಟ್‌ಗೆ ಹಾಜರಾಗಲಿರುವ ಹಾಥರಸ್ ಅತ್ಯಾಚಾರ‌ ಸಂತ್ರಸ್ತೆ ಕುಟುಂಬ

ಬಿಗಿಭದ್ರತೆ ನಡುವೆ ಹಾಥರಸ್‌ನಿಂದ ಲಖನೌಗೆ ಹೊರಟಿರುವ ಕುಟುಂಬದ ಸದಸ್ಯರು

ಪಿಟಿಐ
Published 12 ಅಕ್ಟೋಬರ್ 2020, 6:31 IST
Last Updated 12 ಅಕ್ಟೋಬರ್ 2020, 6:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಹಾಥರಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದ‌ ಸಂತ್ರಸ್ತೆಯಕುಟುಂಬದ ಸದಸ್ಯರು ಇಂದು (ಅ.12) ಬಿಗಿ ಭದ್ರತೆಯ ನಡುವೆ ಇಲ್ಲಿನ ಅಲಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠದ ಎದುರು ಹಾಜರಾಗಲಿದ್ದಾರೆ.

ಸಂತ್ರಸ್ತೆಯ ತಂದೆ, ತಾಯಿ ಮತ್ತು ಮೂವರು ಸಹೋದರರು ಸೋಮವಾರ ಬೆಳಿಗ್ಗೆ 6 ಗಂಟೆಗೆ ಹಾಥರಸ್‌ನಿಂದ ಹೊರಟಿದ್ದು, ಮಧ್ಯಾಹ್ನದ ವೇಳೆಗೆ ಲಖನೌ ತಲುಪಲಿದ್ದಾರೆ.

ಘಟನೆಯ ಕುರಿತು ತಮ್ಮ ಹೇಳಿಕೆ ನೀಡುವಂತೆ ಅಕ್ಟೋಬರ್ 1 ರಂದು ನ್ಯಾಯಾಲಯ ಸಂತ್ರಸ್ತೆಯ ಕುಟುಂಬದವರಿಗೆ ತಿಳಿಸಿತ್ತು. ಹಾಗೆಯೇ, ಸಂತ್ರಸ್ತೆಯ ಕುಟುಂಬದವರು ನ್ಯಾಯಾಲಯದ ಎದುರು ಹಾಜರಾಗಲು ಬೇಕಾದ ಪ್ರಯಾಣದ ವ್ಯವಸ್ಥೆ ಮಾಡಿಕೊಡುವಂತೆ ಹಾಥರಸ್ ಜಿಲ್ಲಾಡಳಿತಕ್ಕೆ ಆದೇಶಿಸಿತ್ತು.

ADVERTISEMENT

’ಬಿಗಿ ಭದ್ರತೆಯೊಂದಿಗೆಸಂತ್ರಸ್ತೆಯ ಕುಟುಂಬದವರನ್ನು ಬೆಳಿಗ್ಗೆ 6 ಗಂಟೆಗೆಹಾಥರಸ್‌ನಿಂದ ಲಖನೌಗೆ ಕಳುಹಿಸಲಾಗಿದೆ. ಸಂತ್ರಸ್ತೆಯ ತಂದೆ, ತಾಯಿ, ಮೂವರು ಸಹೋದರರ ಜತೆಯಲ್ಲಿ ಮ್ಯಾಜಿಸ್ಟ್ರೇಟ್ ಅಂಜಲಿ ಗಂಗ್ವಾರ್ ಹಾಗೂ ಸರ್ಕಲ್‌ ಇನ್ಸ್‌ಪೆಕ್ಟರ್ ಇದ್ದಾರೆ’ ಎಂದು ಪ್ರಕರಣದ ನೋಡಲ್ ಅಧಿಕಾರಿ ಡಿಐಜಿ ಶಲಬ್‌ ಮಾಥೂರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ನ್ಯಾಯಾಲಯ ಕುಟುಂಬದ ಸದಸ್ಯರನ್ನು ವೈಯಕ್ತಿಕವಾಗಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಮಧ್ಯಾಹ್ನ 2.15ಕ್ಕೆ ನ್ಯಾಯಮೂರ್ತಿಗಳಾದ ಪಂಕಜ್ಮಿತ್ತಲ್ಮತ್ತು ರಾಜನ್ ರಾಯ್ ಅವರ ವಿಭಾಗೀಯ ಪೀಠದ ಎದುರು ಪ್ರಕರಣ ವಿಚಾರಣೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.