ADVERTISEMENT

ಜ್ಞಾನವಾಪಿ ಸ್ಥಳ ಸಮೀಕ್ಷೆ: ತಡೆಯಾಜ್ಞೆ ವಿಸ್ತರಣೆ

ಪಿಟಿಐ
Published 31 ಅಕ್ಟೋಬರ್ 2022, 13:02 IST
Last Updated 31 ಅಕ್ಟೋಬರ್ 2022, 13:02 IST
ಕಾಶಿ ವಿಶ್ವನಾಥ– ಜ್ಞಾನವಾಪಿ ಮಸೀದಿ ಸಂಕೀರ್ಣ
ಕಾಶಿ ವಿಶ್ವನಾಥ– ಜ್ಞಾನವಾಪಿ ಮಸೀದಿ ಸಂಕೀರ್ಣ   

ಪ್ರಯಾಗ್‌ರಾಜ್ :ಜ್ಞಾನವಾಪಿಮಸೀದಿ ಸಂಕೀರ್ಣದ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಇಲಾಖೆಗೆ ಅನುಮತಿ ಕೊಟ್ಟಿದ್ದ ವಾರಾಣಸಿ ನ್ಯಾಯಾಲಯದ ಆದೇಶಕ್ಕೆ ಅಕ್ಟೋಬರ್ 31ರವರೆಗೆ ನೀಡಿದ್ದ ತಡೆಯಾಜ್ಞೆಯನ್ನುಅಲಹಾಬಾದ್ ಹೈಕೋರ್ಟ್ ನವೆಂಬರ್‌ 30ರವರೆಗೆ ವಿಸ್ತರಿಸಿದೆ.

ಕಾಶಿ ವಿಶ್ವನಾಥ ದೇವಾಲಯ–ಜ್ಞಾನವಾಪಿ ಮಸೀದಿ ಸಂಕೀರ್ಣಕ್ಕೆ ಸಂಬಂಧಿಸಿ ಅಲಹಾಬಾದ್ ಹೈಕೋರ್ಟ್ ನಿರ್ದೇಶನ ಪಾಲಿಸುವುದಾಗಿಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ)ಸೋಮವಾರ ಕೋರ್ಟ್‌ಗೆ ತಿಳಿಸಿದೆ.

ನ್ಯಾಯಮೂರ್ತಿ ಪ್ರಕಾಶ್‌ ಪಾಡಿಯಾ ವಾದ–ಪ್ರತಿವಾದ ಆಲಿಸಿದ ನಂತರ ಮುಂದಿನ ವಿಚಾರಣೆಯನ್ನು ನ.11ಕ್ಕೆ ನಿಗದಿಪಡಿಸಿದರು.

ADVERTISEMENT

ಜ್ಞಾನವಾಪಿ ಮಸೀದಿಯು ಕಾಶಿ ವಿಶ್ವನಾಥದೇವಾಲಯದ ಒಂದು ಭಾಗ. ಪ್ರಸ್ತುತ ಮಸೀದಿಯ ಸ್ಥಳದಲ್ಲಿ ಪ್ರಾಚೀನ ದೇಗುಲವನ್ನು ಪುನರ್‌ ಸ್ಥಾಪಿಸುವಂತೆ ಕೋರಿ 1991ರಲ್ಲಿ ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಈ ಮೂಲ ಅರ್ಜಿಯನ್ನುಅಂಜುಮನ್ ಇಂತಿಜಾಮಿಯಾ ಮಸೀದಿ, ವಾರಾಣಸಿ ಮಸೀದಿ ನಿರ್ವಹಣಾ ಸಮಿತಿ ಮತ್ತು ಇತರರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.