ADVERTISEMENT

ಹಿಮಾಚ್ಚಾದಿತ ಈ ರೈಲು ನಿಲ್ದಾಣ ಯಾವುದೆಂದು ಊಹಿಸಿ? ಇದು ಭೂಮಿಯ ಮೇಲಿನ ಸ್ವರ್ಗ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜನವರಿ 2023, 8:43 IST
Last Updated 19 ಜನವರಿ 2023, 8:43 IST
ಭಾರತೀಯ ರೈಲು ನಿಲ್ದಾಣ
ಭಾರತೀಯ ರೈಲು ನಿಲ್ದಾಣ   

ನವದೆಹಲಿ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಭಾರತೀಯ ರೈಲು ನಿಲ್ದಾಣದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು ಇದು ಯಾವ ಸ್ಥಳವೆಂದು ಹೇಳುವಿರಾ ಎಂದು ಸಚಿವರು ನೆಟ್ಟಿಗರನ್ನು ಪ್ರಶ್ನೆ ಮಾಡಿದ್ದಾರೆ.

ಅದು ಒಂದು ರೈಲು ನಿಲ್ದಾಣ, ಸಂಪೂರ್ಣವಾಗಿ ಹಿಮದಿಂದ ಆವೃತವಾಗಿದೆ. ರೈಲ್ವೆ ಟ್ರ್ಯಾಕುಗಳ ಸಹ ಕೂಡ ಹಿಮದಿಂದ ಮುಚ್ಚಿ ಹೋಗಿವೆ, ಇದರ ನಡುವೆ ರೈಲೊಂದು ಬರುತ್ತಿರುವ ಚಿತ್ರವನ್ನು ಸಚಿವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಂತರ ಈ ರೈಲು ನಿಲ್ದಾಣ ಯಾವುದೆಂದು ಊಹಿಸಿ? ಎಂದು ಪ್ರಶ್ನೆ ಕೇಳಿದ್ದಾರೆ. ಇದು ಭೂಮಿ ಮೇಲಿನ ಸ್ವರ್ಗ ಎಂಬ ಸುಳಿವನ್ನು ನೀಡಿದ್ದಾರೆ.

ADVERTISEMENT

ಸಾವಿರಾರು ಬಳಕೆದಾರರು ಸಚಿವರ ಪ್ರಶ್ನೆಗೆ ಸರಿಯಾದ ಉತ್ತರ ನೀಡಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಸಚಿವರ ಪ್ರಶ್ನೆಗೆ ಬಹುತೇಕರು ಸರಿಯಾದ ಉತ್ತರ ನೀಡಿದ್ದಾರೆ. ಕೆಲವರು ತಪ್ಪು ಉತ್ತರಗಳನ್ನು ಸಹ ಕೊಟ್ಟಿದ್ದಾರೆ.

ಜಮ್ಮು ಮತ್ತು ಕಾಶ್ಮಿರದ ಬರಾಮುಲ್ಲಾ ಪ್ರದೇಶದ ಬನಿಹಾಲ್‌–ಬದ್ಗಾಂ ನಡುವಿನ ಅವಂತಿಪುರ ರೈಲು ನಿಲ್ದಾಣ ಎಂದು ಹಲವಾರು ಜನರು ಟ್ವೀಟ್‌ ಮಾಡಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.