ADVERTISEMENT

ಪ್ರೀತಿ ಮಾಡಿ ಹಿಂಸಿಸುತ್ತಿದ್ದಾನೆ ಮೋದಿ ಭಕ್ತ: ಸಂತ್ರಸ್ತೆಯ ಮನ್‌ ಕಿ ಬಾತ್

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 12:23 IST
Last Updated 3 ಫೆಬ್ರುವರಿ 2019, 12:23 IST
   

ಬೆಂಗಳೂರು: ಇಲ್ಲಿದೆ ನೋಡಿ ಮೋದಿ ಭಕ್ತನ ಮತ್ತೊಂದು ಮುಖದ ಕಥೆ... ‌

ಹೀಗೆಂದು,ಅಲ್ಪಿಕಾ ಪಾಂಡೆ ಎಂಬುವವರು ಟ್ವಿಟ್ಟರ್‌ನಲ್ಲಿ ನೋವಿನ ಕಥೆ ಬರೆದುಕೊಂಡಿದ್ದಾರೆ. ಮೋದಿ ಭಕ್ತಿಯ ಕಾರಣಕ್ಕೆ ಚಿಗುರಿದ ಪ್ರೀತಿಯ ಕರಾಳ ಮುಖವನ್ನು ಈ ಯುವತಿ ಸರಣಿ ಟ್ವೀಟ್‌ಗಳಲ್ಲಿ ಬಿಚ್ಚಿಟ್ಟಿದ್ದಾಳೆ.

ರಾಹುಲ್‌ಗಾಂಧಿಯ ಫೇಸ್‌ಬುಕ್‌ ಪೇಜ್‌ನ ಪೋಸ್ಟ್‌ವೊಂದಕ್ಕೆ ಪ್ರತಿಕ್ರಿಯಿಸಿದ್ದ ಜಯದೇವ ಅವರ ಬರಹವನ್ನು ಇಷ್ಟ ಪಟ್ಟ ಯುವತಿ ಅದನ್ನು ಲೈಕ್‌ ಮಾಡಿದ್ದರು. ಇದರಿಂದಲೇ ಅವರಿಬ್ಬರ ನಡುವೆ ಪ್ರೀತಿಯೂ ಹುಟ್ಟಿಕೊಂಡಿತು. ನರೇಂದ್ರ ಮೋದಿಯ ಮೇಲಿನ ಭಕ್ತಿ ಅವರನ್ನು ಒಂದಾಗಿಸಿತ್ತು. ಆ ಯುವತಿಯೇ ಅಲ್ಪಿಕಾ ಪಾಂಡೆ.

ADVERTISEMENT

‘ನನಗೆ ಕೇವಲ 18 ವರ್ಷ. ಅವನಿಗೆ 29. ಮುಖ ನೋಡಿದರೆ ಹಾಗೆ ಕಾಣಿಸುವುದಿಲ್ಲ. ಮೊಟ್ಟ ಮೊದಲನೆಯದಾಗಿ ನನ್ನ ಅನುಮತಿ ಇಲ್ಲದೆಯೇ, ಪ್ರಚಾರ ಪಡೆಯುವ ಲಾಭದ ಉದ್ದೇಶದಿಂದ ನನ್ನ ಚಿತ್ರವನ್ನು ಬಳಸಿಕೊಂಡಿದ್ದಾನೆ. ಬಿಜೆಪಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ತನ್ನ ವ್ಯಕ್ತಿತ್ವವನ್ನು ವೈಭವೀಕರಿಸಿಕೊಳ್ಳುವುದಕ್ಕಾಗಿ ಉಪಯೋಗಿಸಿಕೊಂಡಿದ್ದಾನೆ’ ಎಂದು ಬರೆದುಕೊಂಡಿದ್ದಾರೆ.

‘ನಾನು ಆತ್ಮಹತ್ಯೆಗ ಯತ್ನಿಸುವಷ್ಟರ ಮಟ್ಟಿಗೆ ಅವನು ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿದ್ದಾನೆ. ಹೀಗೆ ಮಾಡುವುದಕ್ಕೆ ಅವನ ಕುಟುಂಬವೂ ಬೆಂಬಲಿಸುತ್ತಿದೆ. ಮರ್ಯಾದೆಯ ಹೆಸರಿನಲ್ಲಿ ಒಬ್ಬಳೆ ಹೊರಗೆ ಹೋಗುವ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದಾರೆ’ ಎಂದು ಹೇಳಿದ್ದಾರೆ.

‘ನನನ್ನು ಅವನು ಎಷ್ಟೊಂದು ಶಂಕಿಸುತ್ತಿದ್ದ ಎಂದರೆ, ಸ್ನಾನದ ಕೊಠಡಿಯಲ್ಲಿ ನಾನು ಏನು ಮಾಡುತ್ತಿದ್ದೆ ಎನ್ನುವುದನ್ನೂ ಸಾಕಷ್ಟು ಬಾರಿ ವಿಚಾರಿಸಿದ್ದ. ಜೊತೆಗೆ ನನ್ನ ಫೋನ್‌ನಲ್ಲಿ ಏನೆಲ್ಲ ಮಾಡಿದೆ ಎಂಬುದನ್ನು ಅವನಿಗೆ ತೋರಿಸಬೇಕಿತ್ತು. ಅವನು ಯಾವತ್ತೂ ನನ್ನ ಖಾಸಗಿತವನ್ನು ಗೌರವಿಸಿಲ್ಲ’ ಎಂದು ವಿವರಿಸಿದ್ದಾರೆ.

‘ನನಗೆ ಅನುಮಾನವಾಗುತ್ತದೆ, ಅವನಿಗೆ ನನ್ನ ಮೇಲಿರುವ ಭಾವನೆಗಳು ನಿಜವೇ ಎಂದು. ಭಕ್ತಿಯ ಹೆಸರಿನಲ್ಲಿ ಮೋದಿ ಭಕ್ತ ಮಾಡುತ್ತಿರುವುದು ಏನು’ ಎಂದು ಆಕೆಯ ಕೊನೆಯ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಅಲ್ಪಿಕಾ ಅವರು ತಮ್ಮಟ್ವೀಟ್‌ ಅನ್ನು ಗುಜರಾತ್‌ ಪೊಲೀಸ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಮಹಿಳಾ ಆಯೋಗ, ಎಬಿವಿಪಿ ಗುಜರಾತ್‌, ನಮೋಅಗೇನ್‌ ಗೆ ಟ್ಯಾಗ್‌ ಮಾಡಿದ್ದಾರೆ. ಇವರ ಟ್ವೀಟನ್ನು 540 ಮಂದಿ ಮರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.