ADVERTISEMENT

ಪಶ್ಚಿಮ ಬಂಗಾಳ: ಮೂವರ ಬಂಧನ, ₹19 ಕೋಟಿ ಮೌಲ್ಯದ ಹೆರಾಯಿನ್ ವಶ

ಪಿಟಿಐ
Published 26 ಆಗಸ್ಟ್ 2021, 7:42 IST
Last Updated 26 ಆಗಸ್ಟ್ 2021, 7:42 IST
ಬಂಧನ– ಪ್ರಾತಿನಿಧಿಕ ಚಿತ್ರ
ಬಂಧನ– ಪ್ರಾತಿನಿಧಿಕ ಚಿತ್ರ   

ಮಾಲ್ಡಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ಪೊಲೀಸ್‌ ಮತ್ತು ರೈಲ್ವೆ ಪೊಲೀಸ್‌ನ ವಿಶೇಷ ಕಾರ್ಯಪಡೆ ನ್ಯೂಜಲಪೈಗುರಿ ರೈಲ್ವೆ ನಿಲ್ದಾಣದಲ್ಲಿ ಮೂವರನ್ನು ಬಂಧಿಸಿ, ಅವರಿಂದ ₹19 ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿವೆ.

ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ದಿಬ್ರುಗಡ್‌– ನವದೆಹಲಿ ವಿಶೇಷ ರಾಜಧಾನಿ ರೈಲಿನ ಬೋಗಿಯೊಂದರ ಮೇಲೆ ಬುಧವಾರ ದಾಳಿ ನಡೆಸಿದ ಎಸ್‌ಟಿಎಫ್‌ ಮತ್ತು ಜಿಆರ್‌ಪಿ ಪೊಲೀಸ್ ತಂಡ ಮೂವರನ್ನು ಬಂಧಿಸಿ, ಅವರಿಂದ 3.8 ಕೆ.ಜಿ ಹೆರಾಯಿನ್ ವಶಪಡಿಸಿಕೊಂಡಿರುವುದಾಗಿ ಎಸ್‌ಟಿಎಫ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಮತ್ತೊಂದು ಕಾರ್ಯಾಚರಣೆಯಲ್ಲಿ ಎಸ್‌ಟಿಎಫ್ ತಂಡ ಇಬ್ಬರು ಶಸ್ತ್ರಾಸ್ತ್ರ ಮರಾಟಗಾರರನ್ನು ಬಂಧಿಸಿ, ಅವರಿಂದ 7.65 ಎಂಎಂ ಶಸ್ತ್ರಾಸ್ತಗಳ 50 ಸುತ್ತು ಗುಂಡುಗಳು, ₹49 ಸಾವಿರ ನಗದನ್ನು ವಶಪಡಿಸಿಕೊಂಡಿದೆ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.