ADVERTISEMENT

ಗುಜರಾತ್‌: ₹450 ಕೋಟಿ ಮೌಲ್ಯದ ಹೆರಾಯಿನ್‌ ವಶ

ಪಿಟಿಐ
Published 29 ಏಪ್ರಿಲ್ 2022, 18:36 IST
Last Updated 29 ಏಪ್ರಿಲ್ 2022, 18:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಹಮದಾಬಾದ್‌ (ಪಿಟಿಐ): ಗುಜರಾತ್‌ನ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್‌) ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯಗಳು (ಡಿಆರ್‌ಐ) ಜಂಟಿ ಕಾರ್ಯಾಚರಣೆ ನಡೆಸಿ, ₹450 ಕೋಟಿ ಮೌಲ್ಯದ 90 ಕೆ.ಜಿ ಹೆರಾಯಿನ್ ಅನ್ನು ಪಿಪಾವಾವ್‌ ಬಂದರಿನಲ್ಲಿ ವಶಪಡಿಸಿಕೊಂಡಿವೆ.

‘ಹೆರಾಯಿನ್‌ ಅನ್ನು ದ್ರಾವಣವನ್ನಾಗಿ ಕರಗಿಸಿ, ಅದರಲ್ಲಿ ಎಲೆಗಳನ್ನು ನೆನೆಸುತ್ತಿದ್ದರು. ಎಲೆಗಳು ಒಣಗಿದ ಬಳಿಕ ಅವುಗಳನ್ನು ರಫ್ತು ಮಾಡಲಾಗುತ್ತಿತ್ತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT