ADVERTISEMENT

₹950 ಕೋಟಿ ಬ್ಯಾಂಕ್‌ ಖಾತರಿ ನೀಡುವಂತೆ ವಿವೊಗೆ ಹೈಕೋರ್ಟ್‌ ಸೂಚನೆ

ಪಿಟಿಐ
Published 13 ಜುಲೈ 2022, 14:08 IST
Last Updated 13 ಜುಲೈ 2022, 14:08 IST
   

ನವದೆಹಲಿ: ಮುಟ್ಟುಗೋಲುಹಾಕಿಕೊಂಡಿದ್ದ ಬ್ಯಾಂಕ್‌ ಖಾತೆಗಳಲ್ಲಿವಹಿವಾಟುನಡೆಸಲು, ಜಾರಿ ನಿರ್ದೇಶನಾಲಯಕ್ಕೆ ಒಂದು ವಾರದೊಳಗೆ ₹950 ಕೋಟಿ ಬ್ಯಾಂಕ್‌ ಖಾತರಿ ನೀಡಬೇಕು ಎಂದು ದೆಹಲಿ ಹೈಕೋರ್ಟ್‌ ಬುಧವಾರ ವಿವೊ ಕಂಪನಿಗೆ ನಿರ್ದೇಶನ ನೀಡಿದೆ. ಹಣ ಅಕ್ರಮವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯವು ಕಂಪನಿಯ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

ಜಾರಿ ನಿರ್ದೇಶನಾಲಯವು ತನ್ನ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದನ್ನು ರದ್ದು ಮಾಡಬೇಕು ಎಂದು ಕೋರಿ ವಿವೊ ಕಂಪನಿಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಕುರಿತು ನ್ಯಾಯಮೂರ್ತಿ ಯಶ್‌ವಂತ್‌ ವರ್ಮಾ ವಿಚಾರಣೆ ನಡೆಸಿದರು. ವಿವೊಸಲ್ಲಿಸಿರುವಅರ್ಜಿಯಕುರಿತು ಒಂದು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಜಾರಿನಿರ್ದೇಶನಾಲಯಕ್ಕೆ ಹೈಕೋರ್ಟ್‌ ನೋಟಿಸ್‌ನೀಡಿದೆ.

ವಿವೊ ಕಂಪನಿಗೂ ಕೆಲವು ನಿರ್ದೇಶನ ನೀಡಿರುವ ಕೋರ್ಟ್‌, ತನ್ನ ಬ್ಯಾಂಕ್‌ ವಹಿವಾಟಿನ ಕುರಿತ ಮಾಹಿತಿಯನ್ನು ಜಾರಿ ನಿರ್ದೇಶನಾಲಯಕ್ಕೆ ನೀಡಬೇಕು. ಜೊತೆಗೆ ಮುಂದಿನ ಆದೇಶದ ವರೆಗೂ ಬ್ಯಾಂಕ್‌ ಖಾತೆಯಲ್ಲಿ ₹251 ಕೋಟಿ ಹಣ ಇಡಬೇಕು. ಈ ಹಣವನ್ನು ಬಳಸಬಾರದು ಎಂದು ಹೇಳಿದೆ.

ADVERTISEMENT

ಜಾರಿ ನಿರ್ದೇಶನಾಲಯವು ದೆಹಲಿ, ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧೆಡೆ ಜುಲೈ 5ರಂದು ವಿವೊ ಕಂಪನಿಯ ಮೇಲೆ ದಾಳಿ ನಡೆಸಿತ್ತು. ಮುಂದಿನ ವಿಚಾರಣೆಯನ್ನು ಜುಲೈ 28ಕ್ಕೆ ಕೋರ್ಟ್‌ ನಿಗದು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.