ADVERTISEMENT

ಹಿಮಾಚಲ: ತೀವ್ರ ಹಿಮಪಾತದಿಂದ ಅಟಲ್‌ ಸುರಂಗದಲ್ಲಿ ಸಿಲುಕಿದ್ದ ಪ್ರವಾಸಿಗರ ರಕ್ಷಣೆ

ಪಿಟಿಐ
Published 30 ಡಿಸೆಂಬರ್ 2022, 12:53 IST
Last Updated 30 ಡಿಸೆಂಬರ್ 2022, 12:53 IST
ಮನಾಲಿಯ ರೋಹ್‌ತಂಗ್‌ ಬಳಿಯ ಅಟಲ್‌ ಸುರಂಗ ಮಾರ್ಗದಲ್ಲಿ ಗುರುವಾರ ಸಾಗಿದ ಪ್ರವಾಸಿಗರ ವಾಹನಗಳು  –ಪಿಟಿಐ ಚಿತ್ರ
ಮನಾಲಿಯ ರೋಹ್‌ತಂಗ್‌ ಬಳಿಯ ಅಟಲ್‌ ಸುರಂಗ ಮಾರ್ಗದಲ್ಲಿ ಗುರುವಾರ ಸಾಗಿದ ಪ್ರವಾಸಿಗರ ವಾಹನಗಳು  –ಪಿಟಿಐ ಚಿತ್ರ   

ಶಿಮ್ಲಾ: ‘ತೀವ್ರ ಹಿಮಪಾತದಿಂದಾಗಿ ಅಟಲ್‌ ಸುರಂಗದಲ್ಲಿ 400 ವಾಹನಗಳಲ್ಲಿ ಸಿಲುಕಿಕೊಂಡಿದ್ದ ಪ್ರವಾಸಿಗರನ್ನು ರಕ್ಷಿಸಲಾಗಿದೆ’ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.

ಮಹಾಲಿ–ಲೇಹ್‌ ‍ಹೆದ್ದಾರಿ ಪ್ರದೇಶದಲ್ಲಿರುವ ಸುರಂಗದ ಪ್ರದೇಶದಲ್ಲಿ ಗುರುವಾರ ಹೆಚ್ಚಿನ ಪ್ರಮಾಣದ ಹಿಮಪಾತ ಉಂಟಾಗಿತ್ತು. ಈ ಕಾರಣದಿಂದಾಗಿ ರಸ್ತೆಗಳು ಜಾರುತ್ತಿದ್ದವು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಕೆಲಾಂಗ್‌ ಹಾಗೂ ಮನಾಲಿ ಪೊಲೀಸ್‌ ತಂಡಗಳು ರಕ್ಷಣಾ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದವು. 10–12 ತಾಸುಗಳ ರಕ್ಷಣಾ ಕಾರ್ಯಚರಣೆಯು ಶುಕ್ರವಾರ ಬೆಳಗಿನ ಜಾವ 4ಕ್ಕೆ ಮುಕ್ತಾಯಗೊಂಡಿತು ಎಂದು ಮಾಹಿತಿ ನೀಡಿದರು.

ADVERTISEMENT

ಈ ಎಲ್ಲದರ ಮಧ್ಯೆ ಸುರಂಗದಲ್ಲಿ ಸಿಲುಕಿದ್ದ ಪ್ರವಾಸಿಗರು ಹಿಮಪಾತವನ್ನು ಸಂಭ್ರಮಿಸುತ್ತಿದ್ದರು. ಈ ಎಲ್ಲರಿಗೂ ಆಹಾರದ ವ್ಯವಸ್ಥೆ ಮಾಡಲಾಗಿತ್ತು.

ಹೊಸ ವರ್ಷದ ಸಂಭ್ರಮಾಚರಣೆಗಾಗಿ ದೊಡ್ಡ ಸಂಖ್ಯೆಯ ಪ್ರವಾಸಿಗರು ಕುಲ್ಲು ಹಾಗೂ ಮನಾಲಿಗೆ ಬರುತ್ತಿದ್ದಾರೆ. ಹೀಗೆ ಬರುವ ಪ್ರವಾಸಿಗರಿಗೆ ನಿಧಾನವಾಗಿ ವಾಹನ ಚಲಾಯಿಸುವಂತೆ ಜಿಲ್ಲಾಧಿಕಾರಿ ಆಶುತೋಷ್‌ ಗಾರ್ಗ್‌ ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.