ಸಾಂದರ್ಭಿಕ ಚಿತ್ರ
ಪಿಟಿಐ(ಸಂಗ್ರಹ ಚಿತ್ರ)
ತಿರುವನಂತಪುರ: ‘ದೇವಸ್ಥಾನದೊಳಗೆ ಪ್ರವೇಶ ಪಡೆಯುವ ಮೊದಲು ಪುರುಷರು ಮೇಲಂಗಿ ಕಳಚಬೇಕು ಎಂಬ ಪರಿಪಾಟವನ್ನು ಕೈಬಿಡಬೇಕು’ ಎಂದು ಸಾಮಾಜಿಕ ಸುಧಾರಕ ಶ್ರೀ ನಾರಾಯಣ ಗುರು ಅವರು ಸ್ಥಾಪಿಸಿದ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಅವರು ಕರೆ ನೀಡಿದರು.
ಮಂಗಳವಾರದ ನಡೆದ ಮಠದ ವಾರ್ಷಿಕ ತೀರ್ಥಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಕೂಡ ಸ್ವಾಮಿ ಸಚ್ಚಿದಾನಂದ ಅವರ ಮಾತನ್ನು ಬೆಂಬಲಿಸಿದರು.
‘ಪುರುಷರು ಜನಿವಾರ ಹಾಕಿದ್ದಾರೆಯೇ ಇಲ್ಲವೇ ಎನ್ನುವುದನ್ನು ಪರೀಕ್ಷಿಸಲು ಮೇಲಂಗಿ ತೆಗೆಯಲು ಹೇಳಲಾಗುತ್ತಿತ್ತು. ಹೀಗೆ ಮಾಡುವುದು ಸಾಮಾಜಿಕ ಪಿಡುಗು. ಇದನ್ನು ಕೊನೆಗೊಳಿಸಲೇಬೇಕು. ನಾರಾಯಣ ಗುರುಗಳೂ ಈ ಪರಿಪಾಠದ ವಿರುದ್ಧ ಇದ್ದರು. ಆದರೂ ‘ಶ್ರೀ ನಾರಾಯಾಣ ಧರ್ಮ ಪರಿಪಾಲನಾ ಯೋಗಂ’ನಂಥ ಸಂಸ್ಥೆಗಳಲ್ಲಿ ಈ ಪರಿಪಾಠವನ್ನು ಮುಂದುವರಿಸಲಾಗುತ್ತಿದೆ. ಈ ಬಗ್ಗೆ ಆ ಸಂಸ್ಥೆಯವರು ಮರುಪರಿಶೀಲಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.