ADVERTISEMENT

ಅಮಿತ್ ಶಾಗೆ ಕೋವಿಡ್–19 ನೆಗೆಟಿವ್: ಟ್ವೀಟ್ ಡಿಲೀಟ್ ಮಾಡಿದ ಬಿಜೆಪಿ ನಾಯಕ ತಿವಾರಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 12:05 IST
Last Updated 9 ಆಗಸ್ಟ್ 2020, 12:05 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ:ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕೋವಿಡ್–19ನಿಂದ ಗುಣಮುಖರಾಗಿದ್ದಾರೆ. ಮಾದರಿ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ ಎಂದು ಬಿಜೆಪಿ ನಾಯಕ ಮನೋಜ್‌ ತಿವಾರಿ ಅವರು ಟ್ವೀಟ್‌ ಮಾಡಿದ್ದರು. ಆದರೆ, ಕೆಲಹೊತ್ತಿನ ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ.

ಶಾ ಅವರು ಗುಣಮುಖರಾಗಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆ, ಗೃಹ ಸಚಿವಾಲಯದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಶಾ ಅವರಿಗೆಮತ್ತೆ ಮಾದರಿ ಪರೀಕ್ಷೆ ನಡೆಸಿಲ್ಲ ಎಂದು ತಿಳಿಸಿದೆ.

ಗೃಹ ಸಚಿವರಿಗೆ ಕೋವಿಡ್-19 ಸೋಂಕು ಇರುವುದುಆಗಸ್ಟ್‌ 2 ರಂದುದೃಢಪಟ್ಟಿತ್ತು. ಹರಿಯಾಣದ ಗುರುಗ್ರಾಮದಲ್ಲಿರುವ ಮೆದಂತಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.