ADVERTISEMENT

ಗೃಹಕಾರ್ಯದರ್ಶಿ ಸೇವಾ ಅವಧಿ 3 ತಿಂಗಳು ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 22:28 IST
Last Updated 26 ಏಪ್ರಿಲ್ 2020, 22:28 IST
ಪ್ರೀತಿ ಸೂದನ್‌
ಪ್ರೀತಿ ಸೂದನ್‌   

ನವದೆಹಲಿ: ಕೋವಿಡ್-‌19ರ ವಿರುದ್ಧದ ಹೋರಾಟದಲ್ಲಿ ನಿರಂತರತೆ ಕಾಯ್ದುಕೊಳ್ಳುವ ಉದ್ದೇಶದಿಂದ, ಕೇಂದ್ರ ಗೃಹಕಾರ್ಯದರ್ಶಿ ಪ್ರೀತಿ ಸೂದನ್‌ ಅವರ ಸೇವೆಯನ್ನು 3 ತಿಂಗಳಿಗೆ ವಿಸ್ತರಿಸಲಾಗಿದೆ.

ಗೃಹ ಕಾರ್ಯದರ್ಶಿ ಹುದ್ದೆ ನಿರ್ವಹಿಸುತ್ತಿರುವವರು ಬದಲಾದರೆ ಕೋವಿಡ್-‌19 ವಿರುದ್ಧದ ಹೋರಾಟದ ಮೇಲೆ ಪರಿಣಾಮ ಉಂಟಾಗಬಹುದು ಎನ್ನುವ ಸಲುವಾಗಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ʼಸಂಪುಟದ ನೇಮಕಾತಿ ಸಮಿತಿʼ (ಎಸಿಸಿ) ಭಾನುವಾರ ಈ ನಿರ್ಣಯ ಕೈಗೊಂಡಿದೆ.

ಸೂದನ್ ಸೇರಿದಂತೆ ಹಲವಾರು ಕಾರ್ಯದರ್ಶಿಗಳು ಇದೇ 30ರಂದು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಮುಖ ಅಧಿಕಾರಿಗಳ ಮಟ್ಟದಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ.

ADVERTISEMENT

ಪ್ರಧಾನಿ ಕಚೇರಿಯಲ್ಲಿನ ಇಬ್ಬರು ಪ್ರಮುಖ ಅಧಿಕಾರಿಗಳಿಗೆ ಬಡ್ತಿ ನೀಡಿ ಪ್ರಮುಖ ಸಚಿವಾಲಯಗಳ ಕಾರ್ಯದರ್ಶಿ ಹುದ್ದೆಗಳಿಗೆ ನಿಯೋಜಿಸಲಾಗಿದೆ. ಇದೇ ವೇಳೆ23 ಐಎಎಸ್‌ ಅಧಿಕಾರಿಗಳಿಗೆ ಹೊಸ ಜವಾಬ್ದಾರಿ ನೀಡಲಾಗಿದೆ.

ಬನ್ಸಾಲ್‌ಗೆಬಡ್ತಿ (ಪಿಟಿಐ):ʼಏರ್‌ ಇಂಡಿಯಾ ಮುಖ್ಯಸ್ಥ ರಾಜೀವ್‌ ಬನ್ಸಾಲ್‌ ಅವರಿಗೆ ಕಾರ್ಯದರ್ಶಿ ಶ್ರೇಣಿಯ ಹುದ್ದೆಗೆ ಬಡ್ತಿ ನೀಡಲಾಗಿದೆʼ ಎಂದು ಭಾನುವಾರ ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದೆ.ಬನ್ಸಾಲ್‌ ಜತೆಗೆ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಮುಖ್ಯಸ್ಥ ಅರವಿಂದ್‌ ಸಿಂಗ್‌ ಅವರಿಗೂ ಕಾರ್ಯದರ್ಶಿ ಶ್ರೇಣಿಯ ಹುದ್ದೆಗೆ ಬಡ್ತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.