ADVERTISEMENT

ಗಾಲಿಕುರ್ಚಿಯಲ್ಲಿ ಸಂಸತ್ತಿಗೆ ಬಂದ ತರೂರ್: ಅಂಗವಿಕಲರ ಸೌಲಭ್ಯದ ಬಗ್ಗೆ ಟ್ವೀಟ್

ಪಿಟಿಐ
Published 20 ಡಿಸೆಂಬರ್ 2022, 15:58 IST
Last Updated 20 ಡಿಸೆಂಬರ್ 2022, 15:58 IST
ನವದೆಹಲಿಯಲ್ಲಿ ಮಂಗಳವಾರ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಸಂಸದ ಶಶಿ ತರೂರ್ ಅವರು ಗಾಲಿಕುರ್ಚಿಯಲ್ಲಿ ಹಾಜರಾದರು  –ಪಿಟಿಐ ಚಿತ್ರ 
ನವದೆಹಲಿಯಲ್ಲಿ ಮಂಗಳವಾರ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಸಂಸದ ಶಶಿ ತರೂರ್ ಅವರು ಗಾಲಿಕುರ್ಚಿಯಲ್ಲಿ ಹಾಜರಾದರು  –ಪಿಟಿಐ ಚಿತ್ರ    

ನವದೆಹಲಿ: ಈಚೆಗಷ್ಟೇ ಎಡಗಾಲು ಉಳುಕಿರುವ ಕಾರಣ, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಮಂಗಳವಾರ ಸಂಸತ್ತಿಗೆ ಗಾಲಿಕುರ್ಚಿಯಲ್ಲಿ ಬಂದರು. ಈ ವೇಳೆ ತಮಗಾದ ಅನುಭವವನ್ನು ದಾಖಲಿಸಿರುವ ಅವರು, ‘ಅಂಗವಿಕಲರಿಗೆ ನಾವು ಎಂಥ ಕೆಟ್ಟ ಸೌಲಭ್ಯ ಕಲ್ಪಿಸಿದ್ದೇವೆ’ ಎಂದು ಟ್ವೀಟ್ ಮಾಡಿದ್ದಾರೆ.

‘ನೀವು ಗಾಲಿಕುರ್ಚಿಯಲ್ಲಿ ಸಂಸತ್ತಿಗೆ ಬರಬೇಕಾದರೆ, ಬಾಗಿಲು ಸಂಖ್ಯೆ 9ರಲ್ಲಿ ಮಾತ್ರ ಒಂದೇ ಒಂದು ರ‍್ಯಾಂಪ್ ಪ್ರವೇಶ ದೊರೆಯುತ್ತದೆ. ಸಹಾಯಕರ ನೆರವಿನೊಂದಿಗೆ ನೀವು ಗಾಲಿಕುರ್ಚಿಯಲ್ಲಿ ನಾಲ್ಕು ನಿಮಿಷ ಪ್ರಯಾಣಿಸಿದರೆ ಸಂಸತ್ತಿನ ಒಳಗೆ ಹೋಗಬಲ್ಲಿರಿ. ಈ ತಾತ್ಕಾಲಿಕ ಅಂಗವೈಕಲ್ಯವು ನಾವು ಅಂಗವಿಕಲರಿಗೆ ಎಷ್ಟು ಕೆಟ್ಟ ಸೌಲಭ್ಯಗಳನ್ನು ಕಲ್ಪಿಸಿದ್ದೇವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದೆ. ಅಂಗವಿಕಲರಿಗೆ ನಾನು ಬೆಂಬಲ ನೀಡುತ್ತೇನೆ’ ಎಂದು ತರೂರ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT