ಶಸ್ತ್ರಾಸ್ತ್ರ ವಶ
(ಪಿಟಿಐ ಸಂಗ್ರಹ ಚಿತ್ರ)
ಇಂಫಾಲ: ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲೆಯ ಐಗೆಜಾಂಗ್ ಪ್ರದೇಶದಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳಲ್ಲಿ ಒಂದು 303 ರೈಫಲ್, ಒಂದು ಬೋಲ್ಟ್ ಆಕ್ಷನ್ ರೈಫಲ್, 22 ಪಿಸ್ತೂಲ್‌ಗಳು, ಒಂದು 9 ಎಂಎಂ ಪಿಸ್ತೂಲ್, ಎರಡು ಎಸ್‌ಬಿಬಿಎಲ್ ರೈಫಲ್‌ಗಳು ಸೇರಿವೆ.
ಜತೆಗೆ 5 ಹ್ಯಾಂಡ್ ಗ್ರೆನೇಡ್‌ಗಳು, 1 ಚೈನೀಸ್ ಹ್ಯಾಂಡ್ ಗ್ರೆನೇಡ್, ನಾಲ್ಕು 40 ಎಂಎಂ ಲೆಥಾಡ್ ಗ್ರೆನೇಡ್‌ಗಳು, ಮಾರ್ಟರ್ ಶೆಲ್‌ಗಳು, ಎರಡು ಅಶ್ರುವಾಯು ಗ್ರೆನೇಡ್‌ಗಳು ಮತ್ತು ಒಂದು ಹೊಗೆ ಗ್ರೆನೇಡ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.