ಮುಂಬೈ: ‘ಮನುಷ್ಯನ ಹಲ್ಲುಗಳು ಅಪಾಯಕಾರಿ ಶಸ್ತ್ರಗಳಲ್ಲ. ಅವುಗಳಿಂದ ಗಂಭೀರ ಸ್ವರೂಪದ ಗಾಯಗಳಾಗುವುದಿಲ್ಲ’ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ‘ನನ್ನ ನಾದಿನಿ ನನ್ನನ್ನು ಕಚ್ಚಿ, ಗಂಭೀರವಾಗಿ ಗಾಯಗೊಳಿಸಿದ್ದಾರೆ’ ಎಂದು ಆರೋಪಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ರದ್ದುಗೊಳಿಸಿ ನ್ಯಾಯಾಲಯ ಈ ರೀತಿ ಅಭಿಪ್ರಾಯಪಟ್ಟಿದೆ.
‘ಮಹಿಳೆಗೆ ಹೆಚ್ಚಿನ ಗಾಯಗಳಾಗಿಲ್ಲ. ಹಲ್ಲುಗಳ ಅಚ್ಚು ಮೂಡಿದೆಯಷ್ಟೆ ಎಂಬುದನ್ನು ವೈದ್ಯಕಿಯ ಪ್ರಮಾಣಪತ್ರದಲ್ಲಿಯೇ ಹೇಳಲಾಗಿದೆ. ಜಮೀನು ವಿವಾದದ ಸಂಬಂಧ ಇಬ್ಬರ ನಡುವೆ ಜಗಳ ನಡೆದಿರಬಹುದು ಎಂದು ತೋರುತ್ತಿದೆ’ ಎಂದು ನ್ಯಾಯಮೂರ್ತಿಗಳಾದ ವಿಭಾ ಕಂಕನವಾಡಿ ಮತ್ತು ಸಂಜಯ್ ದೇಶಮುಖ ಅವರಿದ್ದ ಪೀಠವು ಹೇಳಿದೆ.
‘ಜಗಳ ನಡೆಯುವ ವೇಳೆಯಲ್ಲಿ ಮಹಿಳೆಯನ್ನು ಆಕೆಯ ನಾದಿನಿ ಕಚ್ಚಿ ಗಾಯಗೊಳಿಸಿದ್ದರು’ ಎಂದು 2020ರ ಏಪ್ರಿಲ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಭಾರತೀಯ ದಂಡ ಸಂಹಿತೆಯ 324ನೇ ಸೆಕ್ಷನ್ (ಅಪಾಯಕಾರಿ ಶಸ್ತ್ರಗಳಿಂದ ಗಾಯಗೊಳಿಸುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.