ADVERTISEMENT

ಬಾಲಾಕೋಟ್‌ ಮಾದರಿ ದಾಳಿಗೆ ಸಿದ್ಧ: ಬದೌರಿಯಾ

ಪಿಟಿಐ
Published 30 ಸೆಪ್ಟೆಂಬರ್ 2019, 20:00 IST
Last Updated 30 ಸೆಪ್ಟೆಂಬರ್ 2019, 20:00 IST
   

ನವದೆಹಲಿ: ಪಾಕಿಸ್ತಾನ ಜತೆಗಿನ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಾಯುಪಡೆ ನಿಗಾ ಇಟ್ಟಿದ್ದು, ಸರ್ಕಾರ ನಿರ್ದೇಶಿಸಿದರೆ ಬಾಲಾಕೋಟ್‌ ಮಾದರಿಯ ದಾಳಿ ನಡೆಸಲೂ ಸಿದ್ಧವಾಗಿದೆ ಎಂದುಭಾರತೀಯ ವಾಯುಪಡೆಯ 26ನೇ ಮುಖ್ಯಸ್ಥರಾಗಿ ಸೋಮವಾರ ಅಧಿಕಾರ ವಹಿಸಿಕೊಂಡ ರಾಕೇಶ್‌ ಕುಮಾರ್ ಸಿಂಗ್‌ ಬದೌರಿಯಾ ಹೇಳಿದ್ದಾರೆ.

‘ರಫೇಲ್‌ ಯುದ್ಧ ವಿಮಾನಗಳಿಂದ ಭಾರತೀಯ ವಾಯುಪಡೆಯ ವೈಮಾನಿಕ ಸಾಮರ್ಥ್ಯ ಹೆಚ್ಚಾಗಿದೆ’ ಎಂದು ಅವರು ತಿಳಿಸಿದ್ದಾರೆ.

ವಾಯುಪಡೆ ನಿರ್ಗಮಿತ ಮುಖ್ಯಸ್ಥ ಬಿ.ಎಸ್‌.ಧನೋವಾ ಅವರು ಬದೌರಿಯಾ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಧನೋವಾ ನಿವೃತ್ತಿ ಹಿನ್ನೆಲೆಯಲ್ಲಿ ಉಪ ಮುಖ್ಯಸ್ಥರಾಗಿದ್ದಬದೌರಿಯಾ ಅವರನ್ನು ನೂತನ ‘ಏರ್‌ ಚೀಫ್‌ ಮಾರ್ಷಲ್‌’ ಆಗಿ ಸೆ. 19ರಂದು ಕೇಂದ್ರ ಘೋಷಿಸಿತ್ತು.

ADVERTISEMENT

ಜೂನ್‌ 1980ರಲ್ಲಿ ವಾಯುಪಡೆಗೆ ಸೇರಿದ ರಾಕೇಶ್‌ ಕುಮಾರ್‌, ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯಲ್ಲಿ (ಎನ್‌ಡಿಎ)ತರಬೇತಿ ಪಡೆದಿದ್ದಾರೆ. ತರಬೇತಿ ವೇಳೆ ಅವರಿಗೆ ‘ಸ್ವಾರ್ಡ್‌ ಆಫ್‌ ಹಾನರ್‌’ ದೊರೆತಿತ್ತು. ‌

ವಾಯಪಡೆಯ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದು,ರಫೇಲ್‌ ಯುದ್ಧ ವಿಮಾನ ಖರೀ ದಿಗೆಸಂಬಂಧಿಸಿದಂತೆ ‘ಭಾರತದ ಸಮಾಲೋಚನಾ ತಂಡ’ದ ಅಧ್ಯಕ್ಷರಾಗಿದ್ದರು.ಬೆಂಗಳೂರಿನಲ್ಲಿರುವ ‘ವಾಯುಪಡೆ ತರಬೇತಿ ಕಮಾಂಡ್‌’ನ ಮುಖ್ಯಸ್ಥರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ಜಾಗ್ವಾರ್‌ ಯುದ್ಧವಿಮಾನ ಸ್ಕ್ವಾಡ್ರನ್ ಕಮಾಂಡರ್ ಆಗಿದ್ದ ಅವರು, 1999ರ ಕಾರ್ಗಿಲ್‌ ಯುದ್ಧದ ವೇಳೆ ನಡೆದ ‘ಆಪರೇಷನ್‌ ಸೇಫ್ಡ್‌ ಸಾಗರ್‌’ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 4,250 ಗಂಟೆ ವಾಯುಯಾನದ ಅನುಭವ ಹೊಂದಿದ್ದು, 26 ಮಾದರಿಯ ಯುದ್ಧ ವಿಮಾನ ಮತ್ತು ರಕ್ಷಣಾ ಸರಕು ಸಾಗಣೆ ವಿಮಾನಗಳನ್ನು ಚಲಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.