ನವದೆಹಲಿ: ‘ಅಗ್ನಿಪಥ್’ ನೇಮಕಾತಿ ಯೋಜನೆಯ ನೋಂದಣಿ ಪ್ರಾರಂಭವಾದ ಕೇವಲ ಆರು ದಿನಗಳಲ್ಲಿ ಭಾರತೀಯ ವಾಯುಪಡೆಗೆ 2,01,000ಕ್ಕೂ ಅಧಿಕ ಅರ್ಜಿಗಳು ಬಂದಿವೆ ಎಂದು ಎಂದು ರಕ್ಷಣಾ ಸಚಿವಾಲಯದ ವಕ್ತಾರ ಎ. ಭರತ್ ಭೂಷಣ್ ಬಾಬು ಟ್ವಿಟರ್‌ನಲ್ಲಿ ಬುಧವಾರ ತಿಳಿಸಿದ್ದಾರೆ.
ಅಗ್ನಿಪಥ್ ಯೋಜನೆಯಡಿಯಲ್ಲಿ, 17.5 ವರ್ಷದಿಂದ21 ವರ್ಷ ವಯಸ್ಸಿನ ಯುವಕರು ನಾಲ್ಕು ವರ್ಷಗಳ ಅವಧಿಗೆ ಸೇರ್ಪಡೆಯಾಗಲಿದ್ದಾರೆ. ಅವರಲ್ಲಿ ಶೇಕಡ 25ರಷ್ಟು ಮಂದಿ ನಿಯಮಿತ ಸೇವೆಗೆ ಸೇರ್ಪಡೆಯಾಗುತ್ತಾರೆ.
ನೋಂದಣಿ ಪ್ರಕ್ರಿಯೆಯು ಜೂನ್ 24ರಂದು ಪ್ರಾರಂಭವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.