ADVERTISEMENT

‘ಅಪಾಯ’ ಇಲ್ಲದಿದ್ದರೆ ಕೋವಿಡ್ ಪರೀಕ್ಷೆ ಅನಗತ್ಯ: ಐಸಿಎಂಆರ್‌ನಿಂದ ನಿಯಮ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 19:30 IST
Last Updated 10 ಜನವರಿ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್‌ ಪೀಡಿತರ ಸಂಪರ್ಕಕ್ಕೆ ಬಂದವರು ‘ಅಪಾಯ ಹಂತ’ದ ವರ್ಗದಲ್ಲಿ ಇಲ್ಲದಿದ್ದಲ್ಲಿ ಅಂತಹವರನ್ನು ಅವರ ವಯಸ್ಸು ಅಥವಾ ಸಹವರ್ತಿ ರೋಗಗಳ ಕಾರಣಕ್ಕೇ ಪರೀಕ್ಷೆಗೆ ಒಳಪಡಿಸಬಾರದು ಎಂಬ ಹೊಸ ಪರೀಕ್ಷಾ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.

ಕೋವಿಡ್‌ ಪರೀಕ್ಷೆಗೆ ಸಂಬಂಧಿಸಿದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್‌) ಈ ಕುರಿತಂತೆ ನೂತನ ಮಾರ್ಗಸೂಚಿ ನಿಯಮಗಳನ್ನು ಪ್ರಕಟಿಸಿದೆ.

ರೋಗ ಲಕ್ಷಣ ಇಲ್ಲದವರು, ಹೋಂ ಐಸೋಲೇಷನ್ ಮಾರ್ಗಸೂಚಿಗೆ ಅನುಸಾರವಾಗಿ ಬಿಡುಗಡೆಗೊಂಡವರು, ಪರಿಷ್ಕೃತ ಮಾರ್ಗಸೂಚಿಯಂತೆ ಆಸ್ಪತ್ರೆಯಿಂದ ಮನೆಗೆ ತೆರಳಿದವರು ಹಾಗೂ ಅಂತರರಾಜ್ಯ ಪ್ರವಾಸ ಮಾಡುತ್ತಿರುವ ವ್ಯಕ್ತಿಗಳಿಗೆ ಕೋವಿಡ್‌ ಪರೀಕ್ಷೆ ಅಗತ್ಯವಿಲ್ಲ ಎಂದು ಮಾರ್ಗಸೂಚಿ ತಿಳಿಸಿದೆ.

ADVERTISEMENT

ಕೇಂದ್ರದ ನೂತನ ಹೋಂ ಐಸೋಲೇಷನ್‌ ನೀತಿಗೆ ಅನುಗುಣವಾಗಿ ನೂತನ ಪರೀಕ್ಷಾ ಕಾರ್ಯತಂತ್ರವನ್ನು ರೂಪಿಸಲಾಗಿದೆ. ಏಳು ದಿನದ ಐಸೋಲೇಷನ್‌ ಅವಧಿಯಲ್ಲಿ ಕಡೆಯ ಮೂರು ದಿನಗಳು ಜ್ವರ ಅಥವ ಯಾವುದೇ ಲಕ್ಷಣ ಕಂಡುಬರದಿದ್ದಲ್ಲಿ ಅಂತಹ ವ್ಯಕ್ತಿಯೂ ಪರೀಕ್ಷೆಗೆ ಒಳಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.

ದೇಶದಾದ್ಯಂತ ಕೊರೊನಾರೂಪಾಂತರ ಸೋಂಕು ಓಮೈಕ್ರಾನ್ ತೀವ್ರಗತಿಯಲ್ಲಿ ಹರಡುತ್ತಿರುವ ಹಂತದಲ್ಲಿಯೇ, ಈ ಪರಿಸ್ಕೃತ ನಿಯಮಗಳನ್ನು ಪ್ರಕಟಿಸಲಾಗಿದೆ.

ಕಳೆದ ತಿಂಗಳು ಕೇಂದ್ರ ಗೃಹ ಸಚಿವಾಲಯವು, ಓಮೈಕ್ರಾನ್‌ ಸೋಂಕು ಈ ಹಿಂದಿನ ಡೆಲ್ಟಾ ತಳಿಗಿಂತಲೂ ಮೂರು ಪಟ್ಟು ವೇಗವಾಗಿ ಹರಡಿಸಲಿದ ಎಂದು ತಿಳಿಸಿತ್ತು.

ಉಳಿದಂತೆ, ವಿದೇಶ ಪ್ರಯಾಣ ತೆರಳುವವರು ಹಾಗೂ ವಿದೇಶದಿಂದ ಬರುವವರು ಪರೀಕ್ಷೆಗೆ ಒಳಪಡುವುದು ಅಗತ್ಯ ಎಂದು ಹೇಳಲಾಗಿದೆ. ದೇಶದಲ್ಲಿ ಸದ್ಯ ನಿತ್ಯ 13 ಲಕ್ಷದಿಂದ 15 ಲಕ್ಷದವರೆಗೂ ಪರೀಕ್ಷೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.