ADVERTISEMENT

ಪ್ರಧಾನಿ ಸ್ಥಾನಕ್ಕೆ ಮಮತಾ ಸೂಕ್ತ: ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 12:06 IST
Last Updated 6 ಜನವರಿ 2019, 12:06 IST
   

ಕೊಲ್ಕತ್ತ: ದೇಶದ ಪ್ರಧಾನ ಮಂತ್ರಿ ಸ್ಥಾನಕ್ಕೆ ಅಕಸ್ಮಾತ್ ಬಂಗಾಳದವರಿಗೆ ಅವಕಾಶ ನೀಡುವ ಸಾಧ್ಯತೆ ಇದ್ದಲ್ಲಿ ಅದಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೂಕ್ತ ವ್ಯಕ್ತಿ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಅಭಿಪ್ರಾಯಪಟ್ಟಿದ್ದಾರೆ.

ತೃಣಮೂಲ ಕಾಂಗ್ರೆಸ್‌ನಅಧ್ಯಕ್ಷೆಯಾಗಿರುವ ಮಮತಾ ಅವರಿಗೆ ಜನ್ಮದಿನದ ಶುಭಾಶಯ ಕೋರಿರುವ ಘೋಷ್, ದೇವರು ನಿಮಗೆ ಯಶಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುವೆ. ಏಕೆಂದರೆ ನಮ್ಮ ರಾಜ್ಯದ ಭವಿಷ್ಯ ನಿಮ್ಮ ಯಶಸ್ಸಿನ ಮೇಲೆ ನಿಂತಿದೆ ಎಂದು ಹೇಳಿದ್ದಾರೆ.

ಮಮತಾ ಅವರು ಆರೋಗ್ಯವಾಗಿರಬೇಕು. ಏಕೆಂದರೆ ಅವರು ಉತ್ತಮ ಆಡಳಿತ ನಡೆಸುತ್ತಾರೆ. ಇದೀಗ ಬಂಗಾಳದಿಂದ ಪ್ರಧಾನಮಂತ್ರಿ ಅಭ್ಯರ್ಥಿ ಸ್ಥಾನಕ್ಕೆ ಆಯ್ಕೆ ಇದ್ದಲ್ಲಿ ಮಮತಾ ಬ್ಯಾನರ್ಜಿ ಅವರೇ ಮೊದಲ ಆಯ್ಕೆ. ಈ ಹಿಂದೆ ಜ್ಯೋತಿ ಬಸು ಕೂಡ ಪ್ರಧಾನಮಂತ್ರಿ ಆಗಬಹುದಿತ್ತು. ಆದರೆ ಪಕ್ಷದವರೇ ಬಿಡಲಿಲ್ಲ ಎಂದು ಹೇಳಿದ್ದಾರೆ.

ADVERTISEMENT

ಪ್ರಣವ್ ಮುಖರ್ಜಿ ಅವರು ರಾಷ್ಟ್ರಪತಿ ಹುದ್ದೆಗೆ ಏರಿದ್ದ ಮೊದಲ ಬೆಂಗಾಳಿ ಎಂಬುದು ಕೂಡ ಗಮನಾರ್ಹ. ಇದೀಗ ಪ್ರಧಾನಮಂತ್ರಿ ಸ್ಥಾನಕ್ಕೆ ಕಾಲ ಒದಗಿ ಬಂದಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.