ADVERTISEMENT

ಕೋವಿಡ್‌ ಲಸಿಕೆ: 2ನೇ ಪ್ರಯೋಗ ಬಹುತೇಕ ಪೂರ್ಣ, ಕೇಂದ್ರ ಬಯಸಿದರೆ ತುರ್ತು ಅನುಮೋದನೆ

ಪಿಟಿಐ
Published 20 ಆಗಸ್ಟ್ 2020, 7:18 IST
Last Updated 20 ಆಗಸ್ಟ್ 2020, 7:18 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಕೋವಿಡ್‌ ಲಸಿಕೆಗಳ ಎರಡನೇ ಹಂತದ ಪ್ರಯೋಗಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದು ಕೇಂದ್ರ ನಿರ್ಧರಿಸಿದರೆ ತುರ್ತು ಅನುಮೋದನೆ ಪಡೆಯಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಹಿರಿಯ ಅಧಿಕಾರಿಯೊಬ್ಬರು ಸಂಸದೀಯ ಸಮಿತಿಗೆ ತಿಳಿಸಿದ್ದಾರೆ.

ಭಾರತ್ ಬಯೋಟೆಕ್, ಝೈಡಸ್ ಕ್ಯಾಡಿಲಾ ಹಾಗೂ ಸೆರಾಮ್‌ ಕಂಪನಿಗಳು ತಯಾರಿಸಿರುವ ಲಸಿಕೆಯ ಕ್ಲಿನಿಕಲ್‌ ಪ್ರಯೋಗಗಳು ವಿವಿಧ ಹಂತಗಳಲ್ಲಿ ಇವೆ ಎಂದು ಐಸಿಎಂಆರ್‌ನ ಮಹಾನಿರ್ದೇಶಕ ಬಲರಾಂ ಭಾರ್ಗವ ಅವರು ಸಂಸದೀಯ ಸ್ಥಾಯಿ ಸಮಿತಿಗೆ ಬುಧವಾರ ತಿಳಿಸಿದರು.

ಭಾರತ್ ಬಯೋಟೆಕ್, ಝೈಡಸ್ ಕ್ಯಾಡಿಲಾ ಲಸಿಕೆಯ ಪ್ರಯೋಗಕ್ಕೆ ಒಳಪಟ್ಟವರು ಸಂಪೂರ್ಣ ಸಹಕಾರ ನೀಡುತ್ತಿದ್ದು ಎರಡನೇ ಮಾದರಿ ಪ್ರಯೋಗಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿವೆ ಎಂದು ಅವರು ಸಮಿತಿಗೆ ಮಾಹಿತಿ ನೀಡಿದ್ದಾರೆ.

ADVERTISEMENT

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸೀರಮ್‌ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆಯ ಎರಡನೇ ಹಂತದ ಪ್ರಯೋಗ ಈ ವಾರಾಂತ್ಯದಲ್ಲಿ ಆರಂಭವಾಗಲಿದೆ. ಇದಕ್ಕಾಗಿ ದೇಶದ 17 ಕೇಂದ್ರಗಳಲ್ಲಿ 1700 ಜನರನ್ನು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ

ಈ ಪ್ರಕ್ರಿಯೆಗಳು ಎಷ್ಟು ದಿನಗಳವರೆಗೆ ನಡೆಯಲಿವೆ ಎಂದು ಸಂಸದರು ಕೇಳಿದಾಗ, ಪ್ರಾಯೋಗಿಕ ಪರೀಕ್ಷೆಗಳು ಸಾಮಾನ್ಯವಾಗಿ 6 ರಿಂದ 9 ತಿಂಗಳು ನಡೆಯಲಿವೆ. ಕೇಂದ್ರ ಸರ್ಕಾರ ನಿರ್ಧರಿಸಿದರೆ ತುರ್ತು ಅನುಮೋದನೆ ಪಡೆಯಬಹುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.