ಅಲಿಗಡ: ಭಾರತದಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ ಎಂದಾದರೆ ಸುಮಯ್ಯಾ ರಾಣಾ ಪಾಕಿಸ್ತಾನಕ್ಕೆ ಹೋಗಲಿ ಎಂದು ಅಲಿಘಡ ಸಂಸದ, ಬಿಜೆಪಿ ನಾಯಕ ಸತೀಶ್ ಕುಮಾರ್ ಗೌತಮ್ ಹೇಳಿದ್ದಾರೆ.
ಅಲಿಗಡದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕವಿ ಮುನಾವರ್ ರಾಣಾ ಅವರ ಪುತ್ರಿ ಸುಮಯ್ಯಾ ರಾಣಾ, ದೇಶದಲ್ಲಿ ಹಿಂಸಾತ್ಮಕ ವಾತಾವರಣ ಇದೆ. ಈ ರೀತಿಯ ವಾತಾವರಣ ಉಸಿರುಗಟ್ಟಿಸುತ್ತದೆ ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ್ ಗೌತಮ್, ಸುಮಯ್ಯಾ ಅವರಿಗೆ ಈ ದೇಶ ಉಸಿರುಗಟ್ಟಿಸುತ್ತಿದೆ ಎಂದಾದರೆ ಪಾಕಿಸ್ತಾನಕ್ಕೆ ಹೋಗಲು ಅವರಿಗೆ ಸಾಕಷ್ಟು ದಾರಿಗಳಿವೆ. ಭಾರತದಲ್ಲಿ ಎಲ್ಲರೂ ಮುಕ್ತವಾಗಿ ಮಾತನಾಡಬಹುದು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.