ADVERTISEMENT

ಅಯೋಧ್ಯೆ ನಗರ ಅಭಿವೃದ್ಧಿಗೆ ಐಐಎಂ–ಇಂದೋರ್‌ ಜೊತೆ ಒಪ್ಪಂದ

ಪಿಟಿಐ
Published 8 ಜನವರಿ 2021, 14:44 IST
Last Updated 8 ಜನವರಿ 2021, 14:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಂದೋರ್‌: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವ ಕಾರಣದಿಂದಾಗಿ, ಆ ನಗರವನ್ನು ಅಂತರರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಅಯೋಧ್ಯೆ ನಗರ ಪಾಲಿಕೆ ಹಾಗೂ ಐಐಎಂ– ಇಂದೋರ್‌ ಒಪ್ಪಂದ ಮಾಡಿಕೊಂಡಿವೆ.

ಕೇಂದ್ರದ ಸ್ವಚ್ಛನಗರ ಪ್ರಶಸ್ತಿಗೆ ಪಾತ್ರವಾಗಿರುವ ಇಂದೋರ್‌ ನಗರದಲ್ಲಿ ಅಳವಡಿಸಿರುವ ಕ್ರಮಗಳನ್ನು ಅನುಸರಿಸಿ, ಅಯೋಧ್ಯೆಯನ್ನು ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಐಐಎಂ– ಇಂದೋರ್‌ ನಿರ್ದೇಶಕ ಹಿಮಾಂಶು ರೈ ಹಾಗೂ ಪಾಲಿಕೆ ಆಯುಕ್ತ ವಿಶಾಲ್‌ ಸಿಂಗ್‌ ಸಹಿ ಹಾಕಿದರು.

‘ಅಯೋಧ್ಯೆಯನ್ನು ವಿಶ್ವದರ್ಜೆಯ ನಗರವಾಗಿ ಅಭಿವೃದ್ಧಿಗೊಳಿಸು ಉದ್ದೇಶ ನಮ್ಮದಾಗಿದೆ. ಧಾರ್ಮಿಕ ಪ್ರವಾಸೋಧ್ಯಮವನ್ನು ಪ್ರೋತ್ಸಾಹಿಸಲು ಪಾಲಿಕೆ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಐಐಎಂ ಜೊತೆಗಿನ ಈ ಒಪ್ಪಂದವು ಇದಕ್ಕೆ ಸಹಕಾರಿಯಾಗಲಿದೆ. ಜ.14ರಿಂದ ಈ ಒಪ್ಪಂದವು ಅನುಷ್ಠಾನಕ್ಕೆ ಬರಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.