ADVERTISEMENT

₹100 ಕೋಟಿ ದತ್ತಿ ನಿಧಿ ಸ್ಥಾಪಿಸಿದ ಐಐಎಂಎ

​ಪ್ರಜಾವಾಣಿ ವಾರ್ತೆ
Published 23 ಜೂನ್ 2020, 16:15 IST
Last Updated 23 ಜೂನ್ 2020, 16:15 IST
   

ಅಹಮದಾಬಾದ್: ‘₹100 ಕೋಟಿ ಆರಂಭಿಕ ಮೊತ್ತದೊಂದಿಗೆ ‘ಐಐಎಂ ಅಹಮದಾಬಾದ್‌ ದತ್ತಿನಿಧಿ’ ಸ್ಥಾಪನೆ ಮಾಡಿರುವುದನ್ನು ಅಹಮದಾಬಾದ್‌ನ ಐಐಎಂ ಮಂಗಳವಾರ ಪ್ರಕಟಿಸಿದೆ. 10 ಮಂದಿ ಹಿರಿಯ ವಿದ್ಯಾರ್ಥಿಗಳು ಆರಂಭಿಕ ಮೊತ್ತ ಒದಗಿಸಿದ್ದಾರೆ.

ಶಿಕ್ಷಣ ಸಂಸ್ಥೆಯೊಂದು ಹೀಗೆ ದತ್ತಿ ನಿಧಿ ಸ್ಥಾಪಿಸಿರುವುದು ಇದೇ ಮೊದಲು. ಮುಂದಿನ ಐದು ವರ್ಷಗಳಲ್ಲಿ ಮೊತ್ತವನ್ನು ₹ 1000 ಕೋಟಿಗೆ ಏರಿಸುವ ಗುರಿ ಇದೆ ಎಂದು ಐಐಎಂಎ ಹೇಳಿಕೆಯಲ್ಲಿ ತಿಳಿಸಿದೆ.

ದತ್ತಿನ ನಿಧಿಯು ಯಾವುದೇ ಶಿಕ್ಷಣ ಸಂಸ್ಥೆಯ ಆರ್ಥಿಕ ಆರೋಗ್ಯವನ್ನು ಬಿಂಬಿಸಲಿದೆ. ಈ ಮೂಲಕ ಸ್ವಾವಲಂಬಿಯಾಗಿ ಬೆಳೆಯಲು ಸಹಕಾರಿ ಆಗಲಿದೆ. ಸ್ವಾಯತ್ತೆ ರಕ್ಷಣೆಯ ಜೊತೆಗೆ ದೀರ್ಘಾವಧಿ ಗುರಿ ಸಾಧನೆಗೂ ಇಂಥ ನಿಧಿಯು ಅನುಕೂಲಕರ’ ಎಂದು ಐಐಎಂಎ ಆಡಳಿತ ಮಂಡಳಿಯ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ಅವರು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.