ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸಹಯೋಗದಲ್ಲಿ ಐಐಟಿ ದೆಹಲಿಬಾಹ್ಯಾಕಾಶ ತಂತ್ರಜ್ಞಾನ ಕೋಶ(ಎಸ್ಟಿಸಿ) ರಚಿಸಲಿದೆ.
ಎಸ್ಟಿಸಿ ರಚನೆ ಕುರಿತು ಐಐಟಿ ದೆಹಲಿ ನಿರ್ದೇಶಕ ವಿ. ರಾಮ್ಗೋಪಾಲ್ ರಾವ್ ಶುಕ್ರವಾರ ಮಾಹಿತಿ ನೀಡಿದರು. ‘ಇಸ್ರೊ ಸಹಯೋಗದಲ್ಲಿ ಈ ಕೋಶ ಕಾರ್ಯನಿರ್ವಹಿಸಲಿದ್ದು, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಸಂಶೋಧನೆಗಳು ನಡೆಯಲಿವೆ’ ಎಂದರು..ಐಐಎಸ್ಸಿ ಬೆಂಗಳೂರು, ಐಐಟಿ ಬಾಂಬೆ, ಐಐಟಿ ಕಾನ್ಪುರ, ಐಐಟಿ ಮದ್ರಾಸ್, ಐಐಟಿ ಗುಹಾವಟಿಯಲ್ಲಿ ಈಗಾಗಲೇ ಎಸ್ಟಿಸಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಸಾಲಿಗೆ ಐಐಟಿ ದೆಹಲಿ ಸೇರಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.