ADVERTISEMENT

ಸುರ್ಜೀತ್‌ ಎಸ್‌. ಭಲ್ಲಾ ಐಎಂಎಫ್‌ಗೆ ನೇಮಕ

ಪಿಟಿಐ
Published 1 ಅಕ್ಟೋಬರ್ 2019, 18:49 IST
Last Updated 1 ಅಕ್ಟೋಬರ್ 2019, 18:49 IST

ನವದೆಹಲಿ: ಖ್ಯಾತ ಆರ್ಥಿಕ ತಜ್ಞ ಸುರ್ಜೀತ್‌ ಎಸ್‌. ಭಲ್ಲಾ ಅವರನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ಮಂಗಳವಾರ ನೇಮಿಸಲಾಗಿದೆ.

ಐಎಂಎಫ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಜಿ ಡೆಪ್ಯೂಟಿ ಗವರ್ನರ್‌ ಸುಬೀರ್‌ ಗೋಕರ್ಣ್‌ ಅವರು ಜುಲೈ 30ರಂದು ಅಮೆರಿಕದಲ್ಲಿ ನಿಧನರಾಗಿದ್ದರಿಂದ ಈ ಹುದ್ದೆ
ತೆರವಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ನೇಮಕಾತಿ ಸಮಿತಿ 71 ವರ್ಷದ ಭಲ್ಲಾ ಅವರನ್ನು ಅಧಿಕಾರ ವಹಿಸಿಕೊಂಡ ದಿನದಿಂದ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ನೇಮಿಸಲು ಅನುಮೋದನೆ ನೀಡಿದೆ.

ADVERTISEMENT

ಪ್ರಧಾನಿ ಅವರ ಆರ್ಥಿಕ ಸಲಹಾ ಮಂಡಳಿಯ ಅರೆಕಾಲಿಕ ಸದಸ್ಯತ್ವಕ್ಕೆ ಭಲ್ಲಾ ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.