ADVERTISEMENT

ಹೊಗಳಿಕೆಯಿಂದ ವೈಯಕ್ತಿಕ ದಾಳಿಗೆವಿಡಿಯೊ ಹಂಚಿಕೊಂಡ ರಾಹುಲ್‌

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 18:28 IST
Last Updated 4 ಡಿಸೆಂಬರ್ 2022, 18:28 IST
   

ನವದೆಹಲಿ (ಪಿಟಿಐ): ತಾವು ರಾಜಕೀಯ ಪ್ರವೇಶಿಸಿದ ಆರಂಭಿಕ ವರ್ಷದಲ್ಲಿ ತಮ್ಮನ್ನು ಹೊಗಳುತ್ತಿದ್ದ ಮಾಧ್ಯಮಗಳು ಈಗ ಅದನ್ನೇ ವೈಯಕ್ತಿಕ ದಾಳಿಯಾಗಿ ಬದಲಾಯಿಸಿಕೊಂಡಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಅಲ್ಲದೆ ತಮ್ಮನ್ನು ಮಾಧ್ಯಮಗಳು ಬಿಂಬಿಸಿರುವ ಕುರಿತು ಸತ್ಯ ಹೇಳಿರುವುದಾಗಿ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ2.15ನಿಮಿಷದ ವಿಡಿಯೊಹಂಚಿಕೊಂಡಿದ್ದಾರೆ.

‘ಮಾಧ್ಯಮದಲ್ಲಿ ನನ್ನ ಚಿತ್ರಣದ ನಿಜವಾದ ಸತ್ಯ‘ ಎಂಬ ವಿಡಿಯೊದಲ್ಲಿ ರಾಹುಲ್‌ ಅವರು, ನನ್ನ ವ್ಯಕ್ತಿತ್ವ ನಾಶಪಡಿಸುವುದಕ್ಕಾಗಿ ಕೆಲ ವರ್ಷಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ.2004ರಲ್ಲಿ ರಾಜಕೀಯ ಪ್ರವೇಶಿಸಿದೆ. 2008–09ರ ವರೆಗೆ ದೇಶದಾದ್ಯಂತದ ಎಲ್ಲ ಮಾಧ್ಯಮಗಳು 24 ಗಂಟೆ ನನ್ನನ್ನು ಹೊಗಳುತ್ತಿದ್ದವು. ನಾನು ನಿಯಮಗಿರಿ ಮತ್ತು ಭಟ್ಟ ಪರ್ಸಾಲ್‌ (ಭೂಸ್ವಾಧೀನ ವಿಷಯ) ವಿಷಯ ಪ್ರಸ್ತಾಪಿಸಿ, ಬಡವರ ಹಕ್ಕು ರಕ್ಷಣೆಗೆ ಕಾರ್ಯೋನ್ಮುಖನಾಗುತ್ತಿದ್ದಂತೆ ಮಾಧ್ಯಮದಲ್ಲಿ ನನ್ನನ್ನು ಲೇವಡಿ ಮಾಡಲು ಆರಂಭಿಸಿದವು ಎಂದೂ ರಾಹುಲ್ ಆರೋಪಿಸಿದ್ದಾರೆ.

ADVERTISEMENT

‘ನನ್ನ ವ್ಯಕ್ತಿತ್ವ ನಾಶಕ್ಕೆ ಅವರು ಮಾಡುವ ಕ್ರಿಯೆ ಎಲ್ಲವೂ ನನಗೆ ಶಕ್ತಿ ತುಂಬುತ್ತವೆ. ಏಕೆಂದರೆ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ದೊಡ್ಡ ಶಕ್ತಿಯ ವಿರುದ್ಧ ಹೋರಾಡಲು ಅಡಿ ಇಟ್ಟಾಗ ವೈಯಕ್ತಿಕ ದಾಳಿ ನಡೆಯುತ್ತದೆ. ಅಂದರೆ ನಾನು ಸರಿಯಾದುದ್ದನ್ನೇ ಮಾಡುತ್ತಿದ್ದೇನೆ ಎಂದರ್ಥ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.