ADVERTISEMENT

ಕಂಪನಿಯ ಸ್ವತಂತ್ರ ನಿರ್ದೇಶಕರು ಚೆಕ್‌ಬೌನ್ಸ್‌ಗೆ ಹೊಣೆಯಲ್ಲ: ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 16:14 IST
Last Updated 1 ಆಗಸ್ಟ್ 2022, 16:14 IST
   

ನವದೆಹಲಿ:ಕಂಪನಿಯಲ್ಲಿ ಸ್ವತಂತ್ರ ನಿರ್ದೇಶಕರು ವ್ಯವಹಾರದ ಅಧಿಕಾರ ಹೊಂದಿಲ್ಲದ ಅಥವಾ ಜವಾಬ್ದಾರಿಯ ಸ್ಥಾನದಲ್ಲಿ ಇಲ್ಲದಿದ್ದಾಗ ನಡೆದ ಚೆಕ್‌ಬೌನ್ಸ್‌ ಪ್ರಕರಣಕ್ಕೆ ಅವರನ್ನು ಬಾಧ್ಯಸ್ಥರನ್ನಾಗಿಸಲಾಗದು ಎಂದುಸುಪ್ರೀಂಕೋರ್ಟ್‌ ಸೋಮವಾರ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ.ಕೆ. ಮಾಹೇಶ್ವರಿ ಅವರಿದ್ದ ಪೀಠವು, ಅಪರಾಧ ದಂಡ ಸಂಹಿತೆ ಅಥವಾ ನೆಗೋಷಿಯೆಬಲ್‌ ಇನ್‌ಸ್ಟ್ರುಮೆಂಟ್‌ ಕಾಯ್ದೆಯ (ಎನ್‌ಐ ಕಾಯ್ದೆ) ಸೆಕ್ಷನ್‌ 138 ಮತ್ತು 141ರಡಿ ಒಂದು ಕಂಪನಿಯ ವ್ಯವಹಾರಗಳಲ್ಲಿಹೊಣೆಗಾರಿಕೆಯು ನಿಯೋಜನೆ ಅಥವಾ ಸ್ಥಾನಮಾನದ ಮೇಲೆ ಅಲ್ಲ, ವ್ಯಕ್ತಿ ವಹಿಸುವ ಪಾತ್ರದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದೆ.

ಸುನಿತಾ ಪಾಲಿತಾ ಮತ್ತು ಇತರರ ವಿರುದ್ಧ ಕಲ್ಕತ್ತ ಹೈಕೋರ್ಟ್‌ನೀಡಿರುವ ತೀರ್ಪು ಪ್ರಶ್ನಿಸಿರುವ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರ ವಾದ ಆಲಿಸಿದ ನಂತರ ಪೀಠವು ಈ ತೀರ್ಪು ನೀಡಿದೆ.

ADVERTISEMENT

ಮೇಯರ್ಸ್‌ ಪಂಚಮಿ ಸ್ಟೋನ್‌ ಕ್ವಾರಿಗೆ ಪಾವತಿಯಾಗಬೇಕಿದ್ದ ₹1.71 ಕೋಟಿಯ ಚೆಕ್‌ ಬೌನ್ಸ್‌ ಆಗಿರುವ ಪ್ರಕರಣದಲ್ಲಿ ಎನ್‌ಐ ಕಾಯ್ದೆಯಡಿಸುನಿತಾ ಪಾಲಿತಾ ಮತ್ತು ಇತರರ ವಿರುದ್ಧ ದೂರು ದಾಖಲಾಗಿತ್ತು. ಈ ದೂರು ರದ್ದುಪಡಿಸಲು ಸುನಿತಾ ಪಾಲಿತಾ ಮತ್ತು ಇತರರು ಸಲ್ಲಿಸಿದ್ದ ಮನವಿಯನ್ನು ಕಲ್ಕತ್ತ ಹೈಕೋರ್ಟ್‌ ತಿರಸ್ಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.