ADVERTISEMENT

ಪಾಕ್‌ ವಿಮಾನಗಳಿಗೆ ಭಾರತ ವಾಯುಪ್ರದೇಶ ನಿರ್ಬಂಧ: ಸೆ. 24ರವರೆಗೆ ವಿಸ್ತರಣೆ

ಪಿಟಿಐ
Published 23 ಆಗಸ್ಟ್ 2025, 9:32 IST
Last Updated 23 ಆಗಸ್ಟ್ 2025, 9:32 IST
<div class="paragraphs"><p>ಪಾಕ್‌ ವಿಮಾನಗಳಿಗೆ ಭಾರತ ನಿರ್ಬಂಧ</p></div>

ಪಾಕ್‌ ವಿಮಾನಗಳಿಗೆ ಭಾರತ ನಿರ್ಬಂಧ

   

Credit: iStock Photo

ನವದೆಹಲಿ: ಪಾಕಿಸ್ತಾನದ ವಿಮಾನಗಳಿಗೆ ಭಾರತದ ವಾಯುಪ್ರದೇಶದ ನಿರ್ಬಂಧವನ್ನು ಸೆಪ್ಟೆಂಬರ್‌ 24ರವರೆಗೆ ವಿಸ್ತರಿಸಲಾಗಿದೆ.

ADVERTISEMENT

ಉಭಯ ರಾಷ್ಟ್ರಗಳು ವಾಯುಪ್ರದೇಶದ ಮೇಲಿನ ನಿರ್ಬಂಧವನ್ನು ವಿಸ್ತರಿಸುವ ಕುರಿತಂತೆ ವಾಯು ಕಾರ್ಯಾಚರಣೆಗೆ ಸಂಬಂಧಿತ ಪ್ರತ್ಯೇಕ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಪಾಕ್‌ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಯಾವುದೇ ವಿಮಾನಗಳು, ಪಾಕ್ ಒಡೆತನದ ಅಥವಾ ಗುತ್ತಿಗೆ ಪಡೆದ ಮಿಲಿಟರಿ ಮತ್ತು ನಾಗರಿಕ ವಿಮಾನಗಳು ಭಾರತದ ವಾಯುಪ್ರದೇಶ ಬಳಸಲು ಅನುಮತಿಸಲಾಗುವುದಿಲ್ಲ ಎಂದು ವರದಿಯಾಗಿದೆ.

ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರ ಹತ್ಯೆಯ ನಂತರ ಪಾಕಿಸ್ತಾನ ಜತೆಗಿನ ರಾಜತಾಂತ್ರಿಕ ಸಂಬಂಧ ಕಳಚಿಕೊಂಡು ಭಾರತವು ಅಲ್ಲಿನ ವಿಮಾನಗಳಿಗೆ ನಿರ್ಬಂಧ ಹೇರಿರುವುದನ್ನೂ ಒಳಗೊಂಡು ಹಲವು ಕ್ರಮಗಳನ್ನು ಕೈಗೊಂಡಿತ್ತು.

ಭಾರತೀಯ ಕಾಲಮಾನದ ಪ್ರಕಾರ ಮೇ 24ರವರೆಗೆ ವಿಧಿಸಿದ್ದ ನಿರ್ಬಂಧವನ್ನು ಆಗಸ್ಟ್‌ 24ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಮತ್ತೆ ಒಂದು ತಿಂಗಳ ಅವಧಿಗೆ (ಸೆಪ್ಟೆಂಬರ್‌ 24) ನಿರ್ಬಂಧವನ್ನು ವಿಸ್ತರಿಸಲಾಗಿದೆ.

ಏತನ್ಮಧ್ಯೆ, ಪಾಕಿಸ್ತಾನವು ಭಾರತದ ವಿಮಾನಗಳಿಗೆ ತನ್ನ ವಾಯುಪ್ರದೇಶ ನಿರ್ಬಂಧವನ್ನು ಸೆಪ್ಟೆಂಬರ್‌ 24ರವರೆಗೆ ವಿಸ್ತರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.