ADVERTISEMENT

ಇಂಡೋನೇಷ್ಯಾಗೆ 2 ಕೋಟಿ ಡೋಸ್ ನೋವೊವ್ಯಾಕ್ಸ್ ಲಸಿಕೆ ರಫ್ತಿಗೆ ಸರ್ಕಾರದ ಅನುಮತಿ

ರಾಯಿಟರ್ಸ್
Published 19 ನವೆಂಬರ್ 2021, 3:37 IST
Last Updated 19 ನವೆಂಬರ್ 2021, 3:37 IST
ರಾಯಿಟರ್ಸ್ ಚಿತ್ರ
ರಾಯಿಟರ್ಸ್ ಚಿತ್ರ   

ನವದೆಹಲಿ: ಸೀರಂ ಇನ್‌ಸ್ಟಿಟ್ಯೂಟ್ ಅಫ್ ಇಂಡಿಯಾ(ಎಸ್‌ಐಐ) ಉತ್ಪಾದಿಸಿರುವ ಕೋವಿಡ್ 19 ಲಸಿಕೆ ನೊವೊವ್ಯಾಕ್ಸ್‌ನ 2 ಕೋಟಿ ಡೋಸ್ ಅನ್ನು ಇಂಡೋನೇಷ್ಯಾಗೆ ರಫ್ತು ಮಾಡಲು ಭಾರತ ಒಪ್ಪಿಗೆ ಸೂಚಿಸಿದೆ ಎಂದು ಸರ್ಕಾರದ ದಾಖಲೆ ಮತ್ತು ಮೂಲಗಳಿಂದ ತಿಳಿದು ಬಂದಿದೆ

ಇದರ ಜೊತೆಗೆ ಭಾರತದಲ್ಲಿ ಅನುಮೋದನೆ ಪಡೆದಿರುವ ಆಸ್ಟ್ರಾಜೆನಿಕಾ ಕಂಪನಿಯ ಎಸ್‌ಐಐ ಉತ್ಪಾದಿಸುತ್ತಿರುವ ಕೋವಿಶೀಲ್ಡ್ ಲಸಿಕೆಯ 1 ಕೋಟಿ ಡೋಸ್ ರಫ್ತು ಮಾಡಲು ಸರ್ಕಾರ ಅನುಮತಿ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಭಾರತದಲ್ಲಿ ಜನರಿಗೆ ನೀಡಲು ಲಸಿಕೆ ಕೊರತೆ ಎದುರಾದ ಬಳಿಕ ಏಪ್ರಿಲ್‌ನಲ್ಲಿ ಲಸಿಕೆ ರಫ್ತು ನಿಲ್ಲಿಸಲಾಗಿತ್ತು. ಇದೀಗ, ಮತ್ತೆ ರಫ್ತಿಗೆ ಸರ್ಕಾರ ಅನುಮೋದಿಸಿದೆ. ಮುಂದಿನ ತಿಂಗಳು ಸರಬರಾಜು ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಮ್ಮ ಕುಟುಂಬದ ಒಡೆತನದ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವು ನವೆಂಬರ್‌ನಲ್ಲಿ 3 ರಿಂದ 4 ಕೋಟಿ ಡೋಸ್ ಲಸಿಕೆಯನ್ನು ರಫ್ತು ಮಾಡಲಿದೆ. ಡಿಸೆಂಬರ್‌ನಲ್ಲಿ ಅದೇ ಪ್ರಮಾಣದ ರಫ್ತು ಮಾಡಲಿದ್ದೇವೆ. ಭಾರತದಲ್ಲಿ ಲಸಿಕೆ ಬೇಡಿಕೆ ಮುಗಿದ ಬಳಿಕ ಜನವರಿಯಲ್ಲಿ ಮತ್ತಷ್ಟು ಪ್ರಮಾಣದ;ಲಸಿಕೆ ರಫ್ತಿಗೆ ಯೋಜಿಸಲಾಗಿದೆ ಎಂದು ಸೀರಂ ಇನ್‌ಸ್ಟಿಟ್ಯೂಟ್ ಸಿಇಒ ರಾಯಿಟರ್ಸ್‌ಗೆ ತಿಳಿಸಿದ್ದರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.