ADVERTISEMENT

ಭಾರತ–ಒಮಾನ್‌ ಜಂಟಿ ಸಮರಾಭ್ಯಾಸ ನಾಳೆಯಿಂದ

ಪಿಟಿಐ
Published 31 ಜುಲೈ 2022, 10:45 IST
Last Updated 31 ಜುಲೈ 2022, 10:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಭಾರತ ಮತ್ತು ಒಮಾನ್‌ ಸೇನೆಯ ಎರಡು ವಾರಗಳ ಜಂಟಿ ಸಮಾರಾಭ್ಯಾಸ ‘ಅಲ್‌ ನಿಜಾಹ್‌ IV’ ರಾಜಸ್ಥಾನದಲ್ಲಿ ಸೋಮವಾರದಿಂದ ಆಗಸ್ಟ್‌ 13ರ ವರೆಗೆ ನಡೆಯಲಿದೆ.

‘ಭಯೋತ್ಪಾದನೆಯ ವಿರುದ್ಧದ ಕಾರ್ಯಾಚರಣೆಗಳಿಗೆ ಈ ಜಂಟಿ ಸಮರಾಭ್ಯಾಸವು ಸಹಾಯಕವಾಗಲಿದೆ. ಜತೆಗೆ, ಪ್ರಾದೇಶಿಕ ಭದ್ರತೆ ಮತ್ತು ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಿಗೂ ಸಹಾಯಕವಾಗಲಿದೆ’ ಎಂದು ಭಾರತದ ರಕ್ಷಣಾ ಸಚಿವಾಲಯ ಹೇಳಿದೆ.

60 ಸದಸ್ಯರ ‘ರಾಯಲ್‌ ಆರ್ಮಿ ಆಫ್‌ ಒಮಾನ್‌’ ತಂಡವು ಭಾರತಕ್ಕೆ ಆಗಮಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.