ADVERTISEMENT

ಭೀಕರ ಭೂಕಂಪ, ಅಪಾರ ಹಾನಿ: ದ್ವೀಪ ರಾಷ್ಟ್ರ ವನೌಟುಗೆ ಭಾರತ ನೆರವು

​ಪ್ರಜಾವಾಣಿ ವಾರ್ತೆ
Published 2 ಜನವರಿ 2025, 13:01 IST
Last Updated 2 ಜನವರಿ 2025, 13:01 IST
ಭಾರತ ಧ್ವಜ
ಭಾರತ ಧ್ವಜ    

ನವದೆಹಲಿ: ಪೆಸಿಫಿಕ್‌ ದ್ವೀಪ ರಾಷ್ಟ್ರ ವನೌಟುನಲ್ಲಿ ಕಳೆದ ತಿಂಗಳು ಸಂಭವಿಸಿದ ಭೀಕರ ಭೂಕಂಪನದಿಂದಾಗಿ ಅಪಾರ ಹಾನಿಯುಂಟಾದ ಹಿನ್ನೆಲೆ ಭಾರತ ₹4.28 ಕೋಟಿ (500,000 ಯುಎಸ್‌ಡಿ) ನೆರವು ಘೋಷಿಸಿದೆ.

ಡಿ.17 ರಂದು ಪೆಸಿಫಿಕ್‌ ಸಮುದ್ರದ ದಕ್ಷಿಣ ಭಾಗದ ವನೌಟು ಕರಾವಳಿ ಬಳಿ 7.4 ತೀವ್ರತೆಯ ಭೂಕಂಪನ ಸಂಭವಿಸಿತ್ತು, ಇದರಿಂದಾಗಿ ದೇಶದಲ್ಲಿ ಅಪಾರ ಪ್ರಮಾಣದ ಜೀವ ಹಾನಿ ಮತ್ತು ಆಸ್ತಿ ಹಾನಿ ಸಂಭವಿಸಿದೆ.

‘ವನೌಟುವಿನಲ್ಲಿ ಸಂಭವಿಸಿದ ದುರಂತಕ್ಕೆ ಭಾರತ ಸಂತಾಪ ಸೂಚಿಸುತ್ತಿದೆ. ಈ ಕಷ್ಟದ ಸಂದರ್ಭದಲ್ಲಿ ದ್ವೀಪ ರಾಷ್ಟ್ರದೊಂದಿಗೆ ಭಾರತ ಜತೆ ನಿಲ್ಲಲಿದೆ. ಪರಿಹಾರ, ಪುನರ್ವಸತಿ ಮತ್ತು ಪುನರ್ನಿರ್ಮಾಣ ಕಾರ್ಯಗಳಿಗಾಗಿ ಸುಮಾರು ₹4.28 ಕೋಟಿಯಷ್ಟು ಮಾನವೀಯ ನೆರವು ನೀಡುತ್ತಿದೆ’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.