
ನವದೆಹಲಿ: ರಕ್ಷಣಾ ನಾವೀನ್ಯತೆಯಲ್ಲಿ ಭಾರತವು ಸುವರ್ಣ ಯುಗಕ್ಕೆ ಕಾಲಿಟ್ಟಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ.
ಇಲ್ಲಿನ ಮಾಣೆಕ್ ಷಾ ಸೆಂಟರ್‌ನಲ್ಲಿ ನಡೆದ ‘ಸ್ವಾವಲಂಬನೆ 2025’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವೇಗವಾಗಿ ಬದಲಾಗುತ್ತಿರುವ ಜಗತ್ತು ಹಾಗೂ ಭೌಗೋಳಿಕ ರಾಜಕೀಯ ವಿಕಸನದ ಈ ಸಂದರ್ಭದಲ್ಲಿ ಭಾರತವು ಪ್ರತಿಕ್ರಿಯಾತ್ಮಕ ತಂತ್ರವನ್ನು ಮೀರಿ ಪೂರ್ವಭಾವಿ ಸನ್ನದ್ಧತೆಯ ತಂತ್ರವನ್ನು ಅಳವಡಿಸಿಕೊಳ್ಳಲೇಬೇಕಾದ ಅಗತ್ಯವಿದೆ’ ಎಂದಿದ್ದಾರೆ.
ಅಲ್ಲದೇ, ‘ರಕ್ಷಣಾ ವ್ಯವಸ್ಥೆಯಲ್ಲಿ ನಾವು ವೇಗವಾಗಿ ಬೃಹತ್ ಹಾಗೂ ಸದೃಢ ರೀತಿಯಲ್ಲಿ ಬೆಳೆಯಬೇಕಿದೆ. ರಕ್ಷಣಾ ನಾವೀನ್ಯತೆಯ ಸುವರ್ಣ ಯುಗಕ್ಕೆ ಕಾಲಿರಿಸಿರುವ ಈ ಸಂದರ್ಭದಲ್ಲಿ ಖಾಸಗಿ ಕ್ಷೇತ್ರದ ಪಾಲುದಾರರು ಕೂಡ ಕೈ ಜೋಡಿಸಬೇಕು. ಉದ್ಯಮದಲ್ಲಿ ಲಾಭ ನಿರೀಕ್ಷಿಸುವುದನ್ನೂ ಮೀರಿ ದೇಶಕ್ಕೆ ಕೊಡುಗೆ ನೀಡುವ ಮನೋಭಾವವನ್ನೂ ರೂಢಿಸಿಕೊಳ್ಳಬೇಕು’ ಎಂದು ರಾಜನಾಥ ಸಿಂಗ್ ಕರೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.