ADVERTISEMENT

ಲಿಬಿಯಾದಿಂದ ಸಿಆರ್‌ಪಿಎಫ್‌ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 20:00 IST
Last Updated 7 ಏಪ್ರಿಲ್ 2019, 20:00 IST
ಸುಷ್ಮಾ ಸ್ವರಾಜ್‌
ಸುಷ್ಮಾ ಸ್ವರಾಜ್‌    

ನವದೆಹಲಿ/ಟ್ರಿಪೋಲಿ (ಪಿಟಿಐ, ಎಎಫ್‌ಪಿ):ಲಿಬಿಯಾದಲ್ಲಿ ಸಂಘರ್ಷ ಪರಿಸ್ಥಿತಿ ತೀವ್ರ ಗೊಂಡಿರುವುದರಿಂದ ಸಿಆರ್‌ಪಿಎಫ್‌ನ 15 ಯೋಧರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ.

ಲಿಬಿಯಾದ ಟ್ರಿಪೋಲಿಯಲ್ಲಿ ಸಿಆರ್‌ಪಿಎಫ್‌ ಯೋಧರನ್ನು ಶಾಂತಿ ಪಾಲನಾ ಪಡೆ ಎಂದು ನಿಯೋಜಿಸಲಾಗಿತ್ತು. ಅಲ್ಲಿ ಪರಿಸ್ಥಿತಿ ಹದಗೆಟ್ಟಿರುವುದರಿಂದ ಯೋಧರನ್ನು ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಟ್ವೀಟ್‌ ಮಾಡಿದ್ದಾರೆ.

ರಾಜಧಾನಿ ಟ್ರಿಪೋಲಿಯಲ್ಲಿ ಸೇನಾಪಡೆಮತ್ತು ಬಂಡುಕೋರರ ನಡುವೆ ಮತ್ತೆ ಸಂಘರ್ಷ ಭುಗಿಲೆದಿದ್ದು, 21 ಮಂದಿ ಸಾವಿಗೀಡಾಗಿದ್ದಾರೆ. ಫೀಲ್ಡ್‌ ಮಾರ್ಷಲ್‌ ಖಲೀಫ್‌ ಹಫ್ತರ್‌ ವಾಯು ದಾಳಿ ನಡೆಸಿದ ಬಳಿಕ ಸರ್ಕಾರಿ ಪಡೆಗಳು ಪ್ರತಿದಾಳಿ ನಡೆಸಿದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.