ಪಾಕಿಸ್ತಾನ ಧ್ವಜ
ನವದೆಹಲಿ: ಅಧಿಕೃತ ಕೆಲಸ ಹೊರತುಪಡಿಸಿದ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದ ಅಡಿ ಇಲ್ಲಿನ ಪಾಕಿಸ್ತಾನ ರಾಯಭಾರಿ ಕಚೇರಿ ಅಧಿಕಾರಿಯೊಬ್ಬರಿಗೆ ದೇಶ ತೊರೆಯಲು ಆದೇಶಿಸಲಾಗಿದೆ.
ಈ ಅಧಿಕಾರಿಗೆ ದೇಶವನ್ನು ತೊರೆಯಲು 24 ಗಂಟೆ ಸಮಯ ನೀಡಲಾಗಿದೆ. ರಾಯಭಾರ ಕಚೇರಿಗೂ ಮಾಹಿತಿ ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
ರಾಯಭಾರ ಕಚೇರಿಯಲ್ಲಿ ಇರುವ ಯಾವುದೇ ರಾಜತಾಂತ್ರಿಕ ಅಥವಾ ಅಧಿಕಾರಿ ತನ್ನ ಕಾರ್ಯ ವ್ಯಾಪ್ತಿಯನ್ನು ಯಾವುದೇ ರೀತಿ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ತಾಕೀತು ಮಾಡಲಾಗಿದೆ.
ಬೇಹುಗಾರಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಮೇ 13ರಂದೂ ಅಧಿಕಾರಿಯೊಬ್ಬರನ್ನು ಗಡೀಪಾರು ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.