ADVERTISEMENT

ಪಾಕ್ ಹೈಕಮಿಷನ್ ಅಧಿಕಾರಿ ಉಚ್ಚಾಟನೆ: 24 ಗಂಟೆಗಳಲ್ಲಿ ದೇಶ ಬಿಡುವಂತೆ ತಾಕೀತು

ಪಿಟಿಐ
Published 13 ಮೇ 2025, 16:32 IST
Last Updated 13 ಮೇ 2025, 16:32 IST
   

ನವದೆಹಲಿ: ಪಾಕಿಸ್ತಾನದ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿ ಅಧಿಕಾರಿಯೊಬ್ಬರು ತಮ್ಮ ಅಧಿಕೃತ ಸ್ಥಾನಮಾನಕ್ಕೆ ಹೊಂದಿಕೆಯಾಗದ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಭಾರತ ಅವರನ್ನು ಮಂಗಳವಾರ ಹೊರಹಾಕಿದೆ.

ವಿದೇಶಾಂಗ ಸಚಿವಾಲಯವು ಅಧಿಕಾರಿಗೆ ಭಾರತವನ್ನು ತೊರೆಯಲು 24 ಗಂಟೆಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದೆ.

ನಾಲ್ಕು ದಿನಗಳ ಮಿಲಿಟರಿ ಮುಖಾಮುಖಿಯ ನಂತರ ಉಭಯ ದೇಶಗಳ ನಡುವೆ ಹೆಚ್ಚಿದ ಉದ್ವಿಗ್ನತೆಯ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ.

ADVERTISEMENT

ಅಧಿಕಾರಿಯ ಚಟುವಟಿಕೆಗಳ ಕುರಿತು ನವದೆಹಲಿಯಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಗೆ ಭಾರತ ನೋಟಿಸ್ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.