ADVERTISEMENT

ಭಾರತದಿಂದ 100 ದೇಶಗಳಿಗೆ 6.5 ಕೋಟಿ ಡೋಸ್‌ ಕೋವಿಡ್‌ ಲಸಿಕೆ ರಫ್ತು

ಪಿಟಿಐ
Published 18 ನವೆಂಬರ್ 2021, 14:58 IST
Last Updated 18 ನವೆಂಬರ್ 2021, 14:58 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಪ್ರಸಕ್ತ ವರ್ಷ ಭಾರತ ಸುಮಾರು 100 ದೇಶಗಳಿಗೆ 6.5 ಕೋಟಿಯಷ್ಟು ಕೋವಿಡ್‌ ಲಸಿಕೆಯನ್ನು ರಫ್ತು ಮಾಡಿದೆ ಎಂದು ಪ್ರಧಾನಿ ಮೋದಿ ಗುರುವಾರ ಹೇಳಿದ್ದಾರೆ.

ಭಾರತೀಯ ಆರೋಗ್ಯ ವಲಯವು ಗಳಿಸಿರುವ ಜಾಗತಿಕ ನಂಬಿಕೆಯಿಂದ ದೇಶವನ್ನು ಈಗ ‘ಜಗತ್ತಿನ ಔಷಧಾಲಯ’ ಎಂದು ಕರೆಯಲು ಸಾಧ್ಯವಾಗಿದೆ ಎಂದೂ ಅವರು ಹೇಳಿದರು.ಔಷಧ ವಲಯದ ಮೊದಲ ಜಾಗತಿಕ ನಾವೀನ್ಯತೆ ಶೃಂಗಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯಮವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯವಿರುವ ವಿಜ್ಞಾನಿಗಳು ಮತ್ತು ತಂತ್ರಜ್ಞರ ದೊಡ್ಡ ಸಮೂಹವನ್ನು ಭಾರತ ಹೊಂದಿದೆ. ಭಾರತದಲ್ಲಿ ಅನ್ವೇಷಿಸಲು ಮತ್ತು ತಯಾರಿಸಲು ಈ ಸಾಮರ್ಥ್ಯ ಬಳಸಿಕೊಳ್ಳಬೇಕಿದೆ ಎಂದು ಅವರು ಪ್ರತಿಪಾದಿಸಿದರು.

ADVERTISEMENT

‘ಇಂದು ಭಾರತದ 103 ಕೋಟಿ ಜನರು ಭಾರತವನ್ನು ಆತ್ಮನಿರ್ಭರವನ್ನು ಮಾಡಲು ಹೊರಟಿರುವಾಗ ಲಸಿಕೆಗಳು ಮತ್ತು ಔಷಧಿಗಳ ಪ್ರಮುಖ ಪದಾರ್ಥಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವತ್ತ ನಾವು ಯೋಚಿಸಬೇಕಿದೆ. ದೇಶ ಇದನ್ನು ಅಳವಡಿಸಿಕೊಳ್ಳಬೇಕಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.