ನಾಗಪುರ: ಭಾರತವು ‘ಸೂಪರ್ ಪವರ್’ ಮತ್ತು ‘ವಿಶ್ವಗುರು’ ಎಂದು ಪುನರುಚ್ಛರಿಸಿರುವ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ‘ದೇಶವು ಪ್ರತಿ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದ್ದು, ಇಡೀ ವಿಶ್ವವೇ ನಮ್ಮ ಧ್ವನಿಯನ್ನು ಆಲಿಸುತ್ತಿದೆ’ ಎಂದು ಹೇಳಿದ್ದಾರೆ.
ಗುರುವಾರ ಇಲ್ಲಿ ರಾಷ್ಟ್ರ ನಿರ್ಮಾಣ ಸಮಿತಿ ವತಿಯಿಂದ ನಡೆದ ‘ಅಖಂಡ ಭಾರತ ಸಂಕಲ್ಪ ದಿನ’ದಲ್ಲಿ ಅವರು ಮಾತನಾಡಿದರು.
‘ನಾವು ಎಲ್ಲ ಕ್ಷೇತ್ರಗಳಲ್ಲಿ ಪಾರಮ್ಯ ಸಾಧಿಸಿದರೆ ಇಡೀ ವಿಶ್ವವೇ ನಮ್ಮ ಧ್ವನಿ ಆಲಿಸುತ್ತದೆ’ ಎಂದ ಅವರು, ‘ಯಾವ ದೇಶವು ರಕ್ಷಣಾ ಕ್ಷೇತ್ರ, ವಿಜ್ಞಾನ, ತಂತ್ರಜ್ಞಾನ, ಆರ್ಥಿಕ, ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದೆಯೋ ಮತ್ತು ಯಾವ ದೇಶದ ಜನರು ದೇಶಭಕ್ತರು, ಸುಸಂಸ್ಕೃತರೂ ಆಗಿದ್ದಾರೋ ಆ ದೇಶವು ‘ವಿಶ್ವಗುರು’ ಎನಿಸಿಕೊಳ್ಳುತ್ತದೆ’ ಎಂದರು.
ಆ.14ರಂದು ದೇಶ ವಿಭಜನೆಯ ಕರಾಳ ನೆನಪಿನ ದಿನ ಆಚರಿಸಲಾಗುತ್ತದೆ. ಈ ವಿಭಜನೆ ಅಸ್ವಾಭಾವಿಕ. ಆದರೆ, ಈ ದಿನವು ದೇಶವನ್ನು ಒಗ್ಗೂಡಿಸಿದ ಅಖಂಡತೆಯ ದಿನವೂ ಆಗಿದೆ ಎಂದು ಗಡ್ಕರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.