ನವದೆಹಲಿ: ದೇಶದಾದ್ಯಂತ ಗುರುವಾರ ಹೊಸದಾಗಿ 47,092 ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಒಟ್ಟು ಸೋಂಕಿನ ಪ್ರಕರಣಗಳ ಸಂಖ್ಯೆ 3,28,57,937ಕ್ಕೆ ಏರಿದೆ.
ದೇಶದಲ್ಲಿ ಒಂದೇ ದಿನ 11,402ರಷ್ಟು ಸಕ್ರಿಯ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,89,583ಕ್ಕೆ ಏರಿಕೆಯಾಗಿದೆ.ಒಟ್ಟು ಸೋಂಕಿನ ಪ್ರಮಾಣ ಶೇ 1.19 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ದಿನ ದೇಶದಲ್ಲಿ ಕೊರೊನಾದಿಂದ 509 ಸಾವುಗಳು ಸಂಭವಿಸಿವೆ. ಇಲ್ಲಿಯವರೆಗೆ ಕೊರೊನಾ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 4,39,529ಕ್ಕೆ ಏರಿದೆ. ಶೇಕಡಾವಾರು ಸಾವಿನ ಪ್ರಮಾಣ 1.34 ರಷ್ಟಿದೆ. ಕಾಯಿಲೆಯಿಂದ ಗುಣಮುಖರಾದವರ ಸಂಖ್ಯೆ 3,20,28,825 ಕ್ಕೆ ಏರಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ 97.48ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ 2.62 ರಷ್ಟಿದೆ. ಕಳೆದ 69 ದಿನಗಳಿಂದ ಶೇ 3ಕ್ಕಿಂತ ಕಡಿಮೆ ಪಾಸಿವಿಟಿ ದರ ದಾಖಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.