ADVERTISEMENT

ಭಾರತ ನಿರ್ಮಿತ ಇವಿಎಂಗಳಿಂದ ನಮ್ಮ ದೇಶದ ಚುನಾವಣೆಯಲ್ಲಿ ದಕ್ಷತೆ: ಭೂತಾನ್ ಸಿಇಸಿ

ಪಿಟಿಐ
Published 23 ಜನವರಿ 2025, 13:39 IST
Last Updated 23 ಜನವರಿ 2025, 13:39 IST
<div class="paragraphs"><p>ಇವಿಎಂ ಮತ್ತು ವಿವಿ ಪ್ಯಾಟ್ (ಪ್ರಾತಿನಿಧಿಕ ಚಿತ್ರ)</p></div>

ಇವಿಎಂ ಮತ್ತು ವಿವಿ ಪ್ಯಾಟ್ (ಪ್ರಾತಿನಿಧಿಕ ಚಿತ್ರ)

   

ನವದೆಹಲಿ: ಭಾರತದಲ್ಲಿ ತಯಾರಿಸಲಾಗಿರುವ ವಿದ್ಯುನ್ಮಾನ ಮತಯಂತ್ರಗಳು(ಇವಿಎಂ) ನಮ್ಮ ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ದಕ್ಷತೆ ತಂದಿವೆ ಎಂದು ಭೂತಾನ್‌ನ ಮುಖ್ಯ ಚುನಾವಣಾ ಆಯುಕ್ತ ದಶೊ ಸೋನಂ ಟಾಪ್‌ಗಾಯ್ ಹೇಳಿದ್ದಾರೆ.

ವಿವಿಧ ದೇಶಗಳ ಚುನಾವಣಾ ಆಯೋಗಗಳ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭೂತಾನ್‌ನಲ್ಲಿ ಇವಿಎಂಗಳು ಜನರ ನಂಬಿಕೆ ಗಳಿಸಿವೆ ಎಂದು ಹೇಳಿದ್ದಾರೆ.

ADVERTISEMENT

ಇವಿಎಂ ಸರಬರಾಜು ಮಾಡಿದ ಭಾರತಕ್ಕೆ ಧನ್ಯವಾದ ಹೇಳಿರುವ ಅವರು, ಇವಿಎಂಗಳ ಬಳಕೆ ಆರಂಭಿಸಿದಾಗಿನಿಂದ ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ದಕ್ಷತೆ ಬಂದಿದೆ ಎಂದು ಹೇಳಿದ್ದಾರೆ.

ಡಿಜಿಟಲ್ ಐಡಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರೀಯ ಏಕೀಕೃತ ಬಯೊಮೆಟ್ರಿಕ್‌ ಐಡಿಗಳನ್ನು ಮತದಾನದ ವೇಳೆ ದೃಢೀಕರಣಕ್ಕೆ ಬಳಸುತ್ತಿರುವುದಾಗಿ ತಿಳಿಸಿದ್ದಾರೆ.

ಭವಿಷ್ಯದಲ್ಲಿ ಆನ್‌ಲೈನ್ ಮತದಾನದ ಸಾಧ್ಯಾಸಾಧ್ಯತೆಗಳ ಬಗ್ಗೆಯೂ ಭೂತಾನ್ ಪರಿಶೀಲಿಸುತ್ತಿದೆ ಎಂದೂ ಅವರು ಹೇಳಿದ್ದಾರೆ.

ಭೂತಾನ್ ಜೊತೆಗೆ ನಿಗದಿತ ಪ್ರಮಾಣದ ಇವಿಎಂಗಳನ್ನು ನೇಪಾಳ ಮತ್ತು ನಮೀಬಿಯಾದಲ್ಲೂ ಬಳಸಲಾಗುತ್ತಿದೆ ಎಂದು ಭಾರತದ ಚುನಾವಣಾ ಆಯೋಗ ತಿಳಿಸಿದೆ.

ಸಾರ್ವಜನಿಕ ವಲಯದ ಬಿಇಎಲ್ ಮತ್ತು ಇಸಿಐಎಲ್ ಸಂಸ್ಥೆಗಳು ಇವಿಎಂಗಳನ್ನು ತಯಾರಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.